ನಟಿ ನಿವೇದಿತಾ ಸದ್ದಿಲ್ಲದೇ “ಶುದ್ಧಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಸುತ್ತ ಸುತ್ತುವ ಈ ಸಿನಿಮಾದಲ್ಲಿ ನಿವೇದಿತಾಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಯಾವ ರೀತಿ ಮತ್ತು ಹೇಗೆಲ್ಲಾ ಶೋಷಣೆಗೆ, ಹಿಂಸೆಗೆ ಒಳಪಡುತ್ತಾಳೆಂಬ ಅಂಶವನ್ನು ನಿರ್ದೇಶಕರು ನಿವೇದಿತಾ ಪಾತ್ರದ ಮೂಲಕ ಹೇಳಿದ್ದಾರೆ.
ಇದು ರೀಲ್ ಸ್ಟೋರಿಯಾದರೆ, ನಿವೇದಿತಾ ರಿಯಲ್ ಆಗಿ ಇತ್ತೀಚೆಗೆ ತೊಂದರೆ ಅನುಭವಿಸಿದ್ದಾರೆ. ಮಾನಸಿಕ ಹಿಂಸೆಯಿಂದ ಒಂದು ಕ್ಷಣ ಏನು ಮಾಡಬೇಕೆಂದು ತೋಚದಂತಹ ಪರಿಸ್ಥಿತಿ ಅವರಿಗೆ ಎದುರಾಗಿದೆ. ಅದು “ಶುದ್ಧಿ’ ಚಿತ್ರೀಕರಣ ಮುಗಿಸಿಕೊಂಡು ಗೋಕಾರ್ಣದಿಂದ ಗೋವಾಗೆ ಹೋದ ನಿವೇದಿತಾರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿಬಿಡುವಂತಹ ಘಟನೆ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಏನು ಆ ಘಟನೆ ಎಂಬುದನ್ನು ಅವರ ಮಾತಲ್ಲೇ ಕೇಳಿ;
“ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗುತ್ತೆ, ಅಸಭ್ಯವಾಗಿ ವರ್ತಿಸುತ್ತಾರೆಂಬುದನ್ನು ನಾನು ಕೇಳಿದ್ದೆ. ಆದರೆ ಇತ್ತೀಚೆಗೆ ಆ ಅನುಭವ ಸ್ವತಃ ನನಗೂ ಆಯಿತು. ನೆನೆಪಿಸಿಕೊಂಡರೆ ಇವತ್ತಿಗೂ ಅಸಹ್ಯವಾಗುತ್ತದೆ. ಆ ಘಟನೆ ನಡೆದಿದ್ದು “ಶುದ್ಧಿ’ ಚಿತ್ರೀಕರಣ ಮುಗಿಸಿಕೊಂಡು ಗೋವಾಕ್ಕೆ ಹೋದ ಸಮಯದಲ್ಲಿ. ಗೋಕಾರ್ಣದಲ್ಲಿ ಚಿತ್ರೀಕರಣ ಮುಗಿಸಿಕೊಂಡು ನಾನು ಗೋವಾಗೆ ಹೊರಟೆ. ಸ್ನೇಹಿತರು ಜೊತೆಗೆ ಬರಿ¤àವಿ ಅಂದ್ರು ಬೇಡ ಎಂದು ನಾನೊಬ್ಬಳೇ ಹೋದೆ.
ಗೋಕಾರ್ಣದಿಂದ ಗೋವಾಗೆ ಟ್ಯಾಕ್ಸಿಯಲ್ಲಿ ಪಯಣ. ಟ್ಯಾಕ್ಸಿಯವನು ಒಳ್ಳೆಯವನು. ಯಾವುದೇ ಕಿರಿಕ್ ಇಲ್ಲದೇ ಗೋವಾ ತಲುಪಿಸಿದ. ಆದರೆ, ಗೋವಾದಲ್ಲಿ ಮಾತ್ರ ಒಂದು ಕಹಿ ಘಟನೆ ನಡೆಯಿತು. ಊಟಕ್ಕೆಂದು ಬೀಚ್‌ಸೈಡ್‌ನ ರೆಸ್ಟೋರೆಂಟ್‌ಗೆ ಹೋದೆ. ಆಗಲೇ ಅಲ್ಲಿ ಒಂದಷ್ಟು ಹುಡುಗರ ಗುಂಪು ಕುಡಿಯುತ್ತಾ ಎಂಜಾಯ್ ಮಾಡುತ್ತಿತ್ತು. ನಾನು ಒಬ್ಬಳೇ ಇರೋದನ್ನು ನೋಡಿ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡಲಾರಂಭಿಸಿತು.
ಒಂದು ಹಂತದಲ್ಲಿ ಕುಡಿದು ತೂರಾಡುತ್ತಾ ಮೈ ಮೇಲೆ ಬೀಳುವ ರೀತಿಯಲ್ಲಿ ಹತ್ತಿರ ಬಂದ ಆ ಗುಂಪು, “ಬರಿ¤àಯಾ, ನಮ್ ಜೊತೆ ಜಾಯಿನ್ ಆಗು’ ಎಂದೆಲ್ಲಾ ಅಸಹ್ಯವಾಗಿ ಕಾಮೆಂಟ್ ಮಾಡಲಾರಂಭಿಸಿತ್ತು. ಹಾಗೆ ನೋಡಿದರೆ ನಾನು ಅಷ್ಟು ಬೇಗ ಹೆದರುವವಳಲ್ಲ. ನನ್ನನ್ನು ಇಂಡಿಪೆಂಡೆಂಟ್ ಆಗಿ ಬೆಳೆಸಿದ್ದಾರೆ. ಎಲ್ಲೇ ಹೋಗುವುದಾದರೂ ನಾನು ಒಬ್ಬಳೇ ಹೋಗುತ್ತೇನೆ. ಶೂಟಿಂಗಿಗೂ ನಾನು ಅಪ್ಪ-ಅಮ್ಮನ ಕರೆದುಕೊಂಡು ಹೋಗುವುದಿಲ್ಲ.
ಅದೇ ರೀತಿ ಗೋವಾಕ್ಕೂ ಒಬ್ಬಳೇ ಹೋಗಿದ್ದೆ. ಆದರೆ ಆ ಗುಂಪಿನ ವರ್ತನೆ ನೋಡಿ ಒಂದು ಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ಆ ರೆಸ್ಟೋರೆಂಟ್‌ನಲ್ಲಿ ಒಬ್ಬ ಸಪ್ಲೆ„ಯರ್ ಕನ್ನಡದವನಾಗಿದ್ದ. ಕೊನೆಗೆ ಅವನ ಸಹಾಯ ತಗೊಂಡು ಅಲ್ಲಿಂದ ನನ್ನ ರೂಂಗೆ ಬಂದೆ. ಆತ “ಮೇಡಂ ಏನೇ ಸಮಸ್ಯೆಯಾದರೂ ಫೋನ್ ಮಾಡಿ’ ಎಂದು ಫೋನ್ ನಂಬರ್ ಕೊಟ್ಟು ಹೋದ. ನಿಜಕ್ಕೂ ಆತನ ಸಹಾಯವನ್ನು ಮರೆಯುವಂತಿಲ್ಲ.
ಕೊನೆಗೆ ನನ್ನ ಸ್ನೇಹಿತರನ್ನು ಬೇಗ ಗೋವಾಕ್ಕೆ ಬರುವಂತೆ ಹೇಳಿದೆ. ಸಮಾಜದಲ್ಲಿ ಇವತ್ತಿಗೂ ಈ ತರಹದ ಘಟನೆಗಳು ನಡೆಯುತ್ತಿವೆ, ಹೆಣ್ಣು ಮಕ್ಕಳು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಸಾಕ್ಷಿಯಂತಾಯಿತು ಆ ಘಟನೆ’ ಎನ್ನುತ್ತಾ ಗೋವಾದಲ್ಲಾದ ಕಹಿ ಘಟನೆಯ ಬಗ್ಗೆ ಹೇಳುತ್ತಾರೆ ನಿವೇದಿತಾ.