Advertisement
ಎನ್‌ಐಎ, ಪ್ರಗತಿಪರ ಖಾಸಗಿ ವಿಶ್ವವಿದ್ಯಾನಿಲಯ ಎನಿಸಿರುವ, ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ ಪಡೆದಿರುವ, ಎನ್ಐಆರ್ಎಫ್ರ್ಯಾಂಕಿಂಗ್ನಲ್ಲಿ 70ನೇ ರ್‍ಯಾಂಕ್ ಹೊಂದಿರುವ ಹಾಗೂ ಕ್ಯೂಎಸ್ ಐ-ಗೇಜ್ ಇಂಡಿಯನ್ ಯುನಿವರ್ಸಿಟಿ ರೇಟಿಂಗ್‌ನಲ್ಲಿ ಡೈಮಂಡ್ ಶ್ರೇಣಿ ಪಡೆದಿರುವ ನಿಟ್ಟೆ (ಪರಿಗಣಿತ ವಿ.ವಿ. ಎನಿಸಲಿರುವ) ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿದೆ. ಎನ್‌ಐಎ ಐದು ವರ್ಷಗಳ ಬ್ಯಾಚುಲರ್ ಆಫ್ ಆರ್ಕಿಟೆಕ್ಟ್ (ಬಿ ಆರ್ಕ್) ಕೋರ್ಸ್ ನಡೆಸುತ್ತಿದ್ದು, ಅದು ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ (ಸಿಓಎ) ಮತ್ತು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಸಿ)ಯ ಅನುಮೋದನೆ ಪಡೆದಿದೆ.
ಎನ್‌ಐಎ ಹೊಂದಿರುವ ಫೌಂಡೇಶನ್ ಸ್ಟುಡಿಯೋದಲ್ಲಿ ಆವೆಮಣ್ಣು, ಬಿದಿರು ಮತ್ತು ಮರವನ್ನು ಉಪಯೋಗಿಸಿ ವಿನ್ಯಾಸದ ಮೂಲತಣ್ತೀಗಳನ್ನು ವಿವರಿಸಲಾಗುತ್ತದೆ. ವಾಸ್ತವ ಜೀವನದ ಚಿತ್ರಣ ಮತ್ತು ಮಾಡೆಲ್‌ಗಳನ್ನು ಬಳಸಿಕೊಂಡ ಸಂರಚನೆಗಳ ಮೂಲಕ ಬೋಧಿಸಲಾಗುತ್ತದೆ. ವರ್ಟಿಕಲ್ ಸ್ಟುಡಿಯೋದಲ್ಲಿ ಪರಸ್ಪರ ಸಂವಹನ, ಕಲ್ಪನೆಗಳ ವಿನಿಮಯ ಮತ್ತು ವಿವಿಧ ವಯೋಮಾನದ ವಿದ್ಯಾರ್ಥಿಗಳ ನಡುವೆ ಗುಂಪು ಕಲಿಕೆಯಂತಹ ಸೌಲಭ್ಯಗಳಿವೆ. ಜತೆಗೆ ಅರ್ಬನ್ ಟ್ರಾವೆಲ್ ಸ್ಟುಡಿಯೋದಲ್ಲಿ ವಿದ್ಯಾರ್ಥಿಗಳು ವಾಸ್ತವ ಜೀವನದ ಚಿತ್ರಣಗಳನ್ನು ಪರಿಶೀಲಿಸುವ, ಅರ್ಥ ಮಾಡಿಕೊಳ್ಳುವ ಮತ್ತು ಬಗೆಹರಿಸುವ ಕೌಶಲವನ್ನು ಬೆಳೆಸಿಕೊಳ್ಳಲು ಅವಕಾಶವಿದೆ. ವಿಶೇಷ ಅಧ್ಯಯನಕ್ಕಾಗಿ ಬೇಸಗೆ ಶಾಲೆಯನ್ನು ರೂಪಿಸಲಾಗಿದ್ದು, ಇದರಲ್ಲಿ ವಿವಿಧ ಕಲೆ ಹಾಗೂ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಎನ್‌ಐಎ ಅತ್ಯಾಕರ್ಷಕ ಶೈಕ್ಷಣಿಕ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ ಹಾಗೂ ಕಲಿಕೆಗೆ ಅಗತ್ಯವಾದ ಎಲ್ಲ ಆಧುನಿಕ ಸೌಲಭ್ಯಗಳನ್ನು, ತರಗತಿ ಹಾಗೂ ಸ್ಟುಡಿಯೋ ಸ್ಥಳಾವಕಾಶವನ್ನು ಹೊಂದಿದೆ.
Related Articles
Advertisement
ಹೆಚ್ಚಿನ ಮಾಹಿತಿಗಾಗಿ: www.nia.nitte.edu.in
ಕಲಿಕೆಯೊಂದಿಗೆ ಕೆಲಸಭಾರತದ ಇತರ ಯಾವುದೇ ಅತ್ಯುನ್ನತ ವಾಸ್ತುಶಿಲ್ಪ ಶಾಲೆಗಳ ಮಾದರಿ ಯಲ್ಲಿ ಎನ್‌ಐಎ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಸಹಕಾರ ಕಲಿಕಾ ತಣ್ತೀದ ಯೋಜನೆಯಡಿ 15 ವಾರ ಗಳ ಕಾಲ ಈ ಭಾಗದ ಯಾವುದೇ ವಿನ್ಯಾಸ ವೃತ್ತಿಪರರ ಜತೆ ಕೆಲಸ ಮಾಡುವ ಅವಕಾಶ ಪಡೆಯು ತ್ತಾರೆ. ಲೀಡ್ ಲ್ಯಾಬ್ ಎಲೆಕ್ಟಿವ್ ಯೋಜನೆಯಡಿ ವಿದ್ಯಾರ್ಥಿಗಳು ನೇರ ಪ್ರಸಾರದ, ಜಾಗತಿಕವಾಗಿ ಪರಿಚಿತ, ಹಸಿರು ಕಟ್ಟಡ ಪ್ರಮಾಣಪತ್ರ ಯೋಜನೆಯನ್ನು ಶಿಕ್ಷಣದ ಅವಧಿಯಲ್ಲೇ ಪಡೆಯಲಿದ್ದಾರೆ.