Advertisement
ಬಿಹಾರದ ಬಿಜೆಪಿ ಘಟಕದಲ್ಲಿಯೇ ಜೆಡಿಯು ಜತೆ ಮೈತ್ರಿ ಮುಂದುವರಿಸಲು ಒಲವಿರಲಿಲ್ಲ. ಆದರೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಒತ್ತಾಸೆ ಹಿನ್ನೆಲೆ ಒಪ್ಪಿಕೊಂಡಿದ್ದರು. 2024ರ ಲೋಕಸಭೆ ಚುನಾ ವಣೆಯಲ್ಲಿ 2019ರಲ್ಲಿ ಗೆದ್ದಿದ್ದಂತೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಸಾಧನೆ ಮಾಡುವ ಮಹತ್ವಾಕಾಂಕ್ಷೆಯೂ ಬಿಜೆಪಿ ವರಿಷ್ಠರಿಗಿತ್ತು. ಆದರೆ ಈಗ ಬಿಹಾರದಲ್ಲಿ ಬಿಜೆಪಿಗೆ ಸ್ವಂತವಾಗಿ ವರ್ಚಸ್ಸು, ಬಲ ವೃದ್ಧಿಸಿಕೊಳ್ಳುವುದು ಅನಿ ವಾರ್ಯವಾಗಿದೆ ಎಂದು ವಿಶ್ಲೇಷಣೆಗಳು ನಡೆದಿವೆ.
Related Articles
Advertisement
ಜನಾಭಿಪ್ರಾಯಕ್ಕೆ ಅವಮಾನ: ನಿತೀಶ್ ನಿರ್ಧಾರ ಪ್ರಕಟವಾಗುತ್ತಲೇ ಹೊಸದಿಲ್ಲಿ, ಪಾಟ್ನಾದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು. ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ ಜೈಸ್ವಾಲ್ ಮಾತನಾಡಿ 2020ರಲ್ಲಿ ರಾಜ್ಯದ ಜನರು ನೀಡಿದ ಜನಾದೇಶಕ್ಕೆ ನಿತೀಶ್ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ. ಅವರ ತಪ್ಪಿಗೆ ಬಿಹಾರದ ಜನರು ಶಿಕ್ಷೆ ನೀಡಲಿದ್ದಾರೆ ಎಂದರು.
ಮಹಾಭಾರತದಲ್ಲಿ ಕಂಸನು ದೇವ ಕಿಯ ಎಲ್ಲ ಪುತ್ರರನ್ನೂ ಕೊಲ್ಲುತ್ತಾನೆ. ಬಿಹಾರದ ಕಂಸನು ಜಾರ್ಜ್ ಫೆರ್ನಾಂಡಿಸ್, ಪ್ರಶಾಂತ್ ಕಿಶೋರ್, ಉಪೇಂದ್ರ ಕುಶ್ವಾಹರನ್ನು ನಾಶ ಮಾಡಿದ್ದಾನೆ. ನಿತೀಶ್ ಅವರಿಗೆ ತಮ್ಮ ಸ್ವಾರ್ಥದ ಮುಂದೆ ಬೇರೇನೂ ಕಾಣುವುದಿಲ್ಲ.-ಚಿರಾಗ್ ಪಾಸ್ವಾನ್, ಎಲ್‌ಜೆಪಿ ನಾಯಕ ಜೆಡಿಯು-ಬಿಜೆಪಿ ಒಡಕಿನ ಹಾದಿ
ಜಾತಿಗಣತಿ ವಿವಾದ
ಬಿಹಾರದಲ್ಲಿ ಜಾತಿಗಣತಿ ನಡೆಸಲೇಬೇಕು ಎಂಬುದು ಜೆಡಿಯು, ಆರ್‌ಜೆಡಿಯ ಪಟ್ಟು. ಸರ್ವಪಕ್ಷ ಸಭೆ ಕರೆದು ಜಾತಿಗಣತಿ ಮಾಡಬೇಕು ಎಂದು ನಿರ್ಧರಿಸಿ, ಕೇಂದ್ರಕ್ಕೂ ಮನವಿ ತಲುಪಿಸಿದ್ದ ನಿತೀಶ್ ಮತ್ತು ತೇಜಸ್ವಿಯಾದವ್. ಆಗಿನಿಂದಲೇ ಬಿಜೆಪಿ-ಜೆಡಿಯು ನಡುವೆ ಒಡಕು ಶುರುವಾಗಿತ್ತು. ಫೆಬ್ರವರಿ: ಒಡಕು ಗೋಚರ
ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಜೆಡಿಯು ಆಗ್ರಹ ವನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಸಿಂಗ್ ವಿರೋಧಿಸಿದ್ದರು. ಇದು ಸರಕಾರದ ವೈಫಲ್ಯ ತೋರಿಸುತ್ತದೆ ಎಂದಿದ್ದರು ಸಿಂಗ್. ಪ್ರತಿಕ್ರಿಯಿಸಿದ್ದ ಜೆಡಿಯು, “ನಿಮ್ಮ ಪಕ್ಷ ಸರಕಾರದ ಭಾಗವೆಂದು ನೆನಪಿರಲಿ’ ಎಂದಿತ್ತು. ಮಾರ್ಚ್: ಸಿಎಂ-ಸ್ಪೀಕರ್ ವೈಮನಸ್ಯ
ಬಜೆಟ್ ಅಧಿವೇಶನದ ವೇಳೆ ಸಂವಿಧಾನದ ಆಶಯದಂತೆ ವಿಧಾನಸಭೆ ಅಧಿವೇಶನ ಮುನ್ನಡೆಸಬೇಕೆಂದು ಸಿಎಂ ನಿತೀಶ್, ಸ್ಪೀಕರ್ ವಿಜಯ್ ಸಿನ್ಹಾರಿಗೆ ಆಗ್ರಹಿಸಿದ್ದರು. ನಂತರ ಹಲವು ದಿನ ಇಬ್ಬರೂ ಅಧಿವೇಶನಕ್ಕೆ ಗೈರಾಗಿದ್ದರು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆ° ಕೇಳಿದ್ದ ಜೆಡಿಯು ಶಾಸಕನನ್ನು ಸ್ಪೀಕರ್ ತರಾಟೆಗೆ ತೆಗೆದುಕೊಂಡಿದ್ದು ನಿತೀಶ್ ಕೋಪಕ್ಕೆ ಕಾರಣವಾಗಿತ್ತು.
ಮೇ: ರಾಜ್ಯಸಭೆ ಟಿಕೆಟ್ ನಿರಾಕರಣೆ
ಕೇಂದ್ರ ಸಂಪುಟದಲ್ಲಿರುವ ತನ್ನ ಏಕೈಕ ಸಚಿವ, ಜೆಡಿಯು ನಾಯಕ ಆರ್‌ಸಿಪಿ ಸಿಂಗ್‌ಗೆ ರಾಜ್ಯ ಸಭೆ ಚುನಾವಣೆ ಟಿಕೆಟ್ ನಿರಾಕರಿಸಿದ ನಿತೀಶ್‌ಕುಮಾರ್. ಜೂನ್: ಅಗ್ನಿಪಥ ಸಂಘರ್ಷ
ಅಗ್ನಿಪಥ ಯೋಜನೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಯಾ ದಾಗ, ಯೋಜನೆಯ ಮರು ಪರಿಶೀಲಿಸುವಂತೆ ಆಗ್ರಹಿಸಿದ ಪಕ್ಷ. “ಮೊದಲು ಮೈತ್ರಿ ಧರ್ಮ ಪಾಲಿಸಿ’ ಎಂದು ತಿರು ಗೇಟು ನೀಡಿದ ಬಿಜೆಪಿ. ಜು. 7: ಸಭೆಗೆ ಗೈರು
ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಬಿಜೆಪಿ-ಜೆಡಿಯು ನಡುವೆ ಕಚ್ಚಾಟ. ಹೊಸ ಧ್ವಜ ಸಂಹಿತೆ ಕುರಿತು ಚರ್ಚಿಸಲು ಕೇಂದ್ರ ಸಚಿವ ಅಮಿತ್ ಶಾ ಕರೆದಿದ್ದ ಎಲ್ಲ ಸಿಎಂಗಳ ಸಭೆಗೆ ಗೈರಾದ ನಿತೀಶ್. ಜು.9- 10: ವರ್ಗಾವಣೆ ಜಗಳ
ಅಧಿಕಾರಿಗಳ ವರ್ಗಾವಣೆ ಮಾಡಿ ತಾನು ಹೊರಡಿಸಿದ್ದ ಆದೇಶಕ್ಕೆ ಸಿಎಂ ಕಾರ್ಯಾಲಯ ತಡೆ ತಂದದ್ದರಿಂದ ಆಕ್ರೋಶಗೊಂಡು ರಾಜೀ ನಾಮೆಯ ಬೆದರಿಕೆ ಹಾಕಿದ ಬಿಜೆಪಿ ಸಚಿವ ರಾಮ್ ಸೂರತ್ ರೈ. ಜು.15: ಪಿಎಫ್ಐ ಸದಸ್ಯರ ಬಂಧನ
ಬಿಹಾರ ಉಗ್ರರ ಹಬ್ ಆಗುತ್ತಿದೆ ಎಂದು ಬಿಜೆಪಿ ಆರೋಪಿಸಿದ ಬಳಿಕ ಪಿಎಫ್ಐನ 3 ಸದಸ್ಯರನ್ನು ಬಂಧಿಸಿದ ಪೊಲೀಸರು. ಇದು ಗೃಹ ಇಲಾಖೆಯ ಹೊಣೆ ಹೊತ್ತಿರುವ ನಿತೀಶ್‌ಗೆ ಬಿಜೆಪಿ ಮಾಡುತ್ತಿರುವ ಅವಮಾನ ಎಂದ ಜೆಡಿಯು. ಜು.22: ರಾಷ್ಟ್ರಪತಿ ಪದಗ್ರಹಣಕ್ಕೆ ಗೈರು
ಮಾಜಿ ರಾಷ್ಟ್ರಪತಿ ಕೋವಿಂದ್, ನೂತನ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರಿಗಾಗಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ನಿತೀಶ್ ಗೈರು.
ಜು. 31: ಪಾಟ್ನಾಗೆ ಶಾ ಭೇಟಿ
ಬಿಜೆಪಿಯ ಎಲ್ಲ ಮುಂಚೂಣಿ ಸಂಘಟನೆ ಗಳೊಂದಿಗೆ ಅಮಿತ್ ಶಾ ಸಭೆ. ನಾಯಕರು ಎಲ್ಲ ಕ್ಷೇತ್ರಗಳಿಗೂ ತೆರಳಿ ಪಕ್ಷವನ್ನು ಬಲಪಡಿಸಲಿ ದ್ದಾರೆ ಎಂಬ ಬಿಜೆಪಿಯ ಘೋಷಣೆಗೆ ಜೆಡಿಯು ವಿರೋಧ. ಜೆಪಿ ನಡ್ಡಾರಿಂದಲೂ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಪಕ್ಷಗಳು ಅವಸಾನ ಕಾಣ ಲಿದ್ದು, ಬಿಜೆಪಿಗೆ ಮಾತ್ರ ಭವಿಷ್ಯವಿದೆ ಎಂದಿ ದ್ದರು. ಇದಕ್ಕೂ ಜೆಡಿಯು ವಿರೋಧಿಸಿತ್ತು. ಆ. 6: ಆರ್‌ಸಿಪಿ ಸಿಂಗ್ ರಾಜೀನಾಮೆ
ನಿತೀಶ್‌ಕುಮಾರ್ ಬಗ್ಗೆ ಅಸಮಾಧಾನಗೊಂಡಿದ್ದ ಕೇಂದ್ರದ ಮಾಜಿ ಸಚಿವ ಆರ್‌ಸಿಪಿ ಸಿಂಗ್ ರಾಜೀನಾಮೆ. ಆ. 7: ಮತ್ತೆ ಸಿಎಂ ಗೈರು
ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಗೂ ಗೈರಾದ ಸಿಎಂ ನಿತೀಶ್ ಕುಮಾರ್.