Advertisement
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಆಯೋಜಿಸಿದ್ದ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದಾಗ, ಮೊದಲ ಬಾರಿಗೆ ಮೈತ್ರಿಯಲ್ಲಿ ಅಪನಂಬಿಕೆ ಕಾಣಿಸಿಕೊಂಡಿತ್ತು. ಅದಾದ ಬಳಿಕ ಚನ್ನಪಟ್ಟಣ ಕದನ ಮೈತ್ರಿಯಲ್ಲಿ ಭಾರೀ ಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರ ನಾಯಕರ ಬೆಂಬಲದ ಕಾರಣಕ್ಕೆ ಕುಮಾರಸ್ವಾಮಿ ಕೈ ಮೇಲಾದಂತೆ ಭಾಸವಾಗುತ್ತಿದೆ. ಆದರೆ ಬಿಜೆಪಿಯ ಆಂತರ್ಯದಲ್ಲಿ ಮಾತ್ರ ಯೋಗೇಶ್ವರ್ ಪರವಾದ ಧೋರಣೆಯಿದೆ.
ಇದೆಲ್ಲದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ವಿಜಯೇಂದ್ರ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದು, ಚನ್ನಪಟ್ಟಣ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಉಸ್ತುವಾರಿ ಡಾ| ರಾಧಾಮೋಹನ್ ಅಗರ್ವಾಲ್ ಅವರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.