ಪಾಟ್ನಾ : ಕೈಗೆಟಕುವ ಬೆಲೆಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಕುರಿತು ವಿದ್ಯಾರ್ಥಿನಿಯರಿಗೆ ಉತ್ತರಿಸುವಾಗ ಸಂದರ್ಭಯೋಚಿತವಲ್ಲದೇ ‘ಕಾಂಡೋಮ್’ ಹೇಳಿಕೆ ನೀಡಿದ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಸಭೆ ಕರೆದ ಸಿಎಂ ನಿತೀಶ್, ರಾಜ್ಯ ಸರ್ಕಾರ ಮಹಿಳೆಯರಿಗೆ ಸಹಾಯ ಮಾಡುತ್ತಿದೆ ಮತ್ತು ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದೆ, ನಾವು ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುತ್ತಿದ್ದೇವೆ. ನಾನು ಪ್ರತಿಯೊಂದನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ : ಪೆರಿಷಬಲ್ ಸರಕು ಸಾಗಣೆ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಮೊದಲ ಸ್ಥಾನ
ಪಾಟ್ನಾದಲ್ಲಿ ಆಯೋಜಿಸಲಾದ ಕಾರ್ಯಾಗಾರದಲ್ಲಿ ಕೈಗೆಟುಕುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಕುರಿತು ಕೇಳಿದಾಗ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಾಮ್ರಾ ಅವರು “ಅವಳಿಗೂ ಕಾಂಡೋಮ್‌ಗಳು ಬೇಕು” ಎಂದು ಸಾರ್ವಜನಿಕವಾಗಿ ಅಣಕಿಸಿದ ಘಟನೆ ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು, ಬಿಹಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಎಂಡಿಯೂ ಆಗಿರುವ ಭಾಮ್ರಾ ಅವರು ವಿದ್ಯಾರ್ಥಿನಿಗೆ ನೀಡಿದ ಹೇಳಿಕೆಗಳಿಗೆ ಲಿಖಿತ ವಿವರಣೆಯನ್ನು ಕೇಳಿದೆ.
ಮುಜುಗರದ ಘಟನೆಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನೋಡಿದ ನಂತರ “ಪ್ರತ್ಯುತ್ತರವನ್ನು ಏಳು ದಿನಗಳಲ್ಲಿ ತಿಳಿಸಬೇಕು” ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.