ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಭಾರತೀಯ ಜನತಾ ಪಕ್ಷ ನಡುವಿನ ಶೀತಲ ಸಮರ ಮತ್ತಷ್ಟು ತಾರಕಕ್ಕೇರಿದ್ದು, ನಿತೀಶ್ ಮತ್ತೊಮ್ಮೆ ಎನ್ ಡಿಎ ಸಖ್ಯದಿಂದ ಹೊರಬರುವ ಸಿದ್ಧತೆಯಲ್ಲಿದ್ದಾರೆ ಎಂಬ ಊಹಾಪೋಹ ಹರಿದಾಡತೊಡಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನೆರೆ ಪರಿಹಾರದಲ್ಲಿ ಸರ್ಕಾರ ಪಾರದರ್ಶಕತೆ ತೋರಬೇಕು: ಎಂ.ಬಿ.ಪಾಟೀಲ್
ಮತ್ತೊಂದೆಡೆ ಸಿಎಂ ನಿತೀಶ್ ಕುಮಾರ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ದೂರವಾಣಿ ಕರೆ ಮಾಡಿ, ಭೇಟಿಗೆ ಸಮಯಾವಕಾಶ ಕೋರಿರುವುದಾಗಿ ವರದಿ ವಿವರಿಸಿದೆ. ಬಿಹಾರವನ್ನು ಭಯೋತ್ಪಾದಕರ ಸ್ವರ್ಗ ಎಂದು ಭಾರತೀಯ ಜನತಾ ಪಕ್ಷ ಬಿಂಬಿಸುತ್ತಿದೆ ಎಂಬುದು ನಿತೀಶ್ ಕುಮಾರ್ ಆರೋಪವಾಗಿದೆ.
ರಾಜಕೀಯದ ಮೂಲಗಳ ಪ್ರಕಾರ, ಬಿಹಾರದಲ್ಲಿ ಮತ್ತೊಮ್ಮೆ ರಾಜಕೀಯದ ಬದಲಾವಣೆಯ ಗಾಳಿ ಬೀಸತೊಡಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಿತೀಶ್ ಕುಮಾರ್ ಪಕ್ಷದ ಎಲ್ಲಾ ಶಾಸಕರ ಸಭೆ ಕರೆದಿರುವುದಾಗಿ ವರದಿ ವಿವರಿಸಿದೆ.
ಮತ್ತೊಂದೆಡೆ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಹಾಗೂ ಕಾಂಗ್ರೆಸ್ ಪಕ್ಷ ಕೂಡಾ ಪ್ರತ್ಯೇಕವಾಗಿ ತಮ್ಮ ಶಾಸಕರ ಸಭೆಯನ್ನು ಕರೆದಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿಗೆ ನಿತೀಶ್ ಕುಮಾರ್ ದೂರವಾಣಿ ಕರೆ ಮತ್ತು ಮೂರು ಪಕ್ಷಗಳ ಸಭೆಯ ಕರೆದಿರುವುದು ಬಿಹಾರ ರಾಜಕೀಯದಲ್ಲಿನ ಬದಲಾವಣೆ ಕುರಿತು ಊಹಾಪೋಹಗಳು ಹರಿದಾಡತೊಡಗಿದೆ.