ನವದೆಹಲಿ:ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ಅವರು ದಿಢೀರ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸುಮನ್ ಕೆ ಬೆರಿ ಅವರನ್ನು ನೂತನ ಉಪಾಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಸುಮನ್ ಅವರು 2022ರ ಮೇ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಆಪ್ತರ ಬಂಧನವಾಗುತ್ತಿದ್ದಂತೆ ಪ್ರಿಯಾಂಕ್ ಖರ್ಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ: ಆರಗ
ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಏಪ್ರಿಲ್ 30ರಂದು ಮುಕ್ತಾಯಗೊಳ್ಳಲಿತ್ತು. ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ವಿಸಿ ಅರವಿಂದ್ ಪನಾಗಾರಿಯಾ ಅವರು ನಿರ್ಗಮಿಸಿದ್ದ ನಂತರ ಪ್ರಮುಖ ಅರ್ಥಶಾಸ್ತ್ರ ತಜ್ಞರಾದ ರಾಜೀವ್ ಕುಮಾರ್ ಅವರು 2017ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಕೇಂದ್ರದ ಆದೇಶದ ಪ್ರಕಾರ, ರಾಜೀವ್ ಕುಮಾರ್ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿದ್ದು, ಅವರನ್ನು ಏಪ್ರಿಲ್ 30ರಂದು ಅನ್ವಯವಾಗುವಂತೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ವಿವರಿಸಿದೆ.
ರಾಜೀವ್ ಕುಮಾರ್ ಅವರು ಆಕ್ಸ್ ಫರ್ಡ್ ಯೂನಿರ್ವಸಿಟಿಯಿಂದ ಎಕಾನಾಮಿಕ್ಸ್ ನಲ್ಲಿ ಡಿಫಿಲ್ ಹಾಗೂ ಲಕ್ನೋ ವಿವಿಯಿಂದ ಪಿಎಚ್ ಡಿ ಪದವಿ ಪಡೆದಿದ್ದರು. ಬೆರಿ ಅವರು ನವದೆಹಲಿಯಲ್ಲಿ ಎಕೋನಾಮಿಕ್ ರಿಸರ್ಚ್ ನ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.