Advertisement
ಪುರುಷರ ಐಪಿಎಲ್ ಅಲ್ಲದೇ ಇದೀಗ ಪ್ರಾರಂಭವಾಗಿರುವ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಕಮಾಲ್ ಮಾಡಲು ಮುಂದಾಗಿದೆ .
Related Articles
Advertisement
ಇದರ ಮಧ್ಯೆ ವನಿತೆಯರ ಕ್ರೀಡೆಯನ್ನು ಬೆಂಬಲಿಸುತ್ತಾ ಬಂದಿರುವ ನೀತಾ ಅಂಬಾನಿ ಅವರೂ ಪಂದ್ಯದುದ್ದಕ್ಕೂ ವನಿತೆಯರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಅಮೋಘ ವಿಜಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ವಿಜಯೋತ್ಸವದಲ್ಲೂ ಭಾಗಿಯಾಗಿದ್ದಾರೆ. ಡಬ್ಲೂಪಿಎಲ್‌ನ ಆರಂಭಿಕ ದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನವಾಗಿದೆ ಎಂದೂ ನೀತಾ ಅಂಬಾನಿ ಹರ್ಷ ವ್ಯಕ್ತಪಡಿಸಿದ್ದಾರೆ.
ʻಇದೊಂದು ಐತಿಹಾಸಿಕ ದಿನವಾಗಿದೆ. ಇದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಮಹಿಳೆಗೂ ಐತಿಹಾಸಿಕ ಕ್ಷಣವಾಗಿದೆ. ಡಬ್ಲೂಪಿಎಲ್‌ನ ಭಾಗವಾಗಿರುವುದು ತುಂಬಾ ರೋಮಾಂಚನಕಾರಿ ಅನುಭವವಾಗಿದೆʼ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ʻಹೆಚ್ಚು ಹೆಚ್ಚು ವನಿತೆಯರು ಕ್ರೀಡೆಯಲ್ಲಿ ಭಾಗವಹಿಸಲು ಮತ್ತು ಕ್ರೀಡೆಯನ್ನೇ ತಮ್ಮ ವೃತ್ತಿಯನ್ನಾಗಿ ಬೆಳೆಸಿಕೊಳ್ಳಲು ಡಬ್ಲೂಪಿಎಲ್ ಪ್ರೇರಣೆಯಾಗಲಿದೆ. ದೇಶದೆಲ್ಲೆಡೆ ವನಿತೆಯರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಈ ಪಂದ್ಯಗಳು ಅತಿ ದೊಡ್ಡ ಪ್ರೇರಣೆಯಾಗಲಿ. ಇದು ಅವರ ಮನಸ್ಸಿಗೆ ಕನಸನ್ನು ನನಸು ಮಾಡಿಕೊಳ್ಳುವ ಶಕ್ತಿ ತುಂಬಲಿʼ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ:ವಿಶ್ವದ ಸ್ಟಾರ್ ವನಿತಾ ಆಟಗಾರ್ತಿಯರಿಂದ ತುಂಬಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನುಭವಿ ಮತ್ತು ಯುವ ಆಟಗಾರ್ತಿಯರ ಬಲವೂ ಇದೆ. ʻಮುಂಬೈ ಇಂಡಿಯನ್ಸ್ ಭಯಮುಕ್ತ ಮತ್ತು ಆಕರ್ಷಕ ಆಟಕ್ಕೆ ಹೆಸರುವಾಸಿ. ನಮ್ಮ ವನಿತೆಯರು ಆರಂಭಿಕ ಪಂದ್ಯದಲ್ಲೇ ತುಂಬಾ ಚೆನ್ನಾಗಿ ಆಡಿದ್ದಾರೆ. ಅವರ ಆಟ ನನಗೆ ಹೆಮ್ಮೆ ತರಿಸಿದೆ. ನಮ್ಮ ನಾಯಕಿ ಹರ್ಮನ್ ಅವರಿಗೆ ವಿಶೇಷ ಅಭಿನಂದನೆಗಳು. ಅವಳಂತೂ ಅದ್ಭುತವಾಗಿ ಆಡಿದ್ದಾಳೆ. ಅಮೆಲಿಯಾ ಕೆರ್ ಕೂಡಾ ತಮ್ಮ ಆಲ್‌ರೌಂಡ್ ಆಟದಿಂದ ಗಮನ ಸೆಳೆದಿದ್ದಾರೆʼ ಎಂದರು.