Advertisement
ಭಾರತದ ಮಾರುಕಟ್ಟೆಯಲ್ಲೀಗ ಮಿನಿ ಎಸ್‌ಯುವಿಗಳದ್ದೇ ಕಾರುಬಾರು. ಹ್ಯುಂಡೈ ಕ್ರೆಟಾ, ಮಾರುತಿ ಸುಝುಕಿ ಬ್ರಿàಝಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋನ್ಪೋರ್ಟ್, ರೆನಾಲ್ಟ್ ಕಾಪcರ್… ಹೀಗೆ. ಈ ಸಾಲಿಗೆ ಇದೀಗ ನಿಸ್ಸಾನ್ ಕಿಕ್ಸ್ ಕೂಡ ಸೇರಿದೆ. ಮಿನಿ ಎಸ್‌ಯುವಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಮನಗಂಡು ಜಪಾನ್‌ನ ನಿಸ್ಸಾನ್ ಕಂಪನಿ, ಕಿಕ್ಸ್ ಅನ್ನು ಬಿಡುಗಡೆ ಮಾಡಿದೆ. ಕಿಕ್ಸ್‌ನ ಎಂಜಿನ್ ಮತ್ತು ಇತರ ಮೆಕ್ಯಾನಿಕ್ ಭಾಗಗಳನ್ನು ರೆನಾಲ್ಟ್ನಿಂದ ಪಡೆದಿದ್ದು, ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಉದ್ದೇಶಿಸಿದೆ.
ನಿಸ್ಸಾನ್ ಕಿಕ್ಸ್‌ನ ವಿನ್ಯಾಸ, ಸಾಂಪ್ರದಾಯಿಕ ಕಿಕ್ಸ್ ವಿನ್ಯಾಸವನ್ನು ಹೊಂದಿದೆ. ಮುಂಭಾಗ ಅಗಲವಾದ ಹೆಡ್‌ಲೈಟ್ ಮತ್ತು ಹಿಂಭಾಗ ದೊಡ್ಡದಾದ ಬ್ರೇಕ್‌ಲೈಟ್, ತುಸು ಆಯತಾಕಾರದ ಮುಂಭಾಗದ ಗ್ರಿಲ್, ಮುಂಭಾಗ ಬಂಪರ್‌ನ ಕೆಳಗೆ ಫಾಗ್ ಲ್ಯಾಂಪ್‌ಗ್ಳು, 17 ಇಂಚಿನ ಅಲಾಯ್ ವೀಲ್‌ಗಳು, ದೊಡ್ಡದಾದ ಬೂಟ್ ಸ್ಪೇಸ್ 2763 ವೀಲ್‌ಬೇಸ್, 210 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದು ಸಣ್ಣ ಎಸ್‌ಯುವಿಗಳಲ್ಲೇ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಆಗಿದೆ. ಒಳಾಂಗಣ ವಿನ್ಯಾಸ
ಹೆಚ್ಚು ಲಕ್ಸುರಿ ಆಗಿ ಕಾಣುವಂತೆ ಕಿಕ್ಸ್ ಅನ್ನು ರೂಪಿಸಲಾಗಿದೆ. ಡ್ಯಾಶ್‌ಬೋಡ್‌ಗೆ ಲೆದರ್ ಹಾಸು, ಡಿಜಿಟಲ್ ಸ್ಪೀಡೋಮೀಟರ್, ಹಿಂಭಾಗ ಮತ್ತು ಮುಂಭಾಗ ಆರ್ಮ್ ರೆಸ್, ಹಿಂಭಾಗದಲ್ಲಿ ಕೂರುವವರಿಗೂ ಎಸಿ ವೆಂಟ್, ಫೋನ್ ಚಾರ್ಚಿಂಗ್ ಸೌಕರ್ಯ, ಪವರ್‌ವಿಂಡೋಗಳು, 4 ಏರ್‌ಬ್ಯಾಗ್‌ಗಳು, ಉತ್ತಮವಾದ ಹೆಡ್‌ರೆಸ್ಟ್‌ಗಳಿವೆ. ಈಗಿನ ಕಾರುಗಳಲ್ಲಿ ಸಾಮಾನ್ಯವಾಗಿರುವಂತೆ ಟಚ್‌ಸ್ಟ್ರೀನ್ ಇನ್ಫೋ ಎಂಟರ್‌ಟೈನ್‌ಮೆಂಟ್ ವ್ಯವಸ್ಥೆಯೂ ಇದರಲ್ಲಿದ್ದು, 8 ಇಂಚಿನ ಸ್ಕ್ರೀನ್ ಇದೆ. ಈ ಮಾದರಿ ಕಾರುಗಳಲ್ಲಿ ಇದು ಅತಿ ದೊಡ್ಡದಾಗಿದೆ. ಇದು ಆ್ಯಂಡ್ರಾಯಿಡ್, ಆ್ಯಪಲ್ ಫೋನ್‌ಗಳಿಗೆ ಸಂಪರ್ಕ ಕಲ್ಪಿಸುವಂತಿದೆ. ವೈಫೈ ಹಾಟ್‌ಸ್ಪಾಟ್ ಅನುಕೂಲವೂ ಇದೆ. ಅಗಲವಾದ ಕ್ಯಾಬಿನ್, ವಿಶಾಲ ಒಳಾಂಗಣ ವಿನ್ಯಾಸ, ಉತ್ತಮ ಆಸನಗಳು ಇದರ ಪ್ಲಸ್ ಪಾಯಿಂಟ್. ಆದರೆ ಹಿಂಭಾಗವೂ ಯುಎಸ್‌ಬಿ ಪೋರ್ಟ್ ಸೌಕರ್ಯ ನೀಡಲಾಗಿಲ್ಲ. ಆಟೋಮ್ಯಾಟಿಕ್ ಏರ್‌ಕಂಡೀಷನ್ ವ್ಯವಸ್ಥೆ, ಮಳೆ ಅಂದಾಜಿಸಿ ಕಾರ್ಯನಿರ್ವಹಿಸುವ ವೈಪರ್‌ಗಳು, ಕೀಲೆಸ್ ಎಂಟ್ರಿ, ಡ್ರೈವರ್ ಸೀಟ್ ಎತ್ತರಿಸುವ ವ್ಯವಸ್ಥೆ, ಐಆರ್‌ವಿಎಮ್, ಸನ್‌ರೂಫ್, ಪಾರ್ಕಿಂಗ್‌ಗೆ ನೆರವಾಗುವಂತೆ ಮೂರು ಕ್ಯಾಮೆರಾಗಳು ಇದರಲ್ಲಿರುವ ಉತ್ತಮ ಸೌಕರ್ಯಗಳಾಗಿವೆ.
Related Articles
ಕಿಕ್ಸ್ 1.5 ಲೀ. ಎಂಜಿನ್ ಆಗಿದ್ದು ರೆನಾಲ್ಟ್ನಲ್ಲೂ ಇದೇ ಎಂಜಿನ್ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಲಭ್ಯವಿದೆ. ಪೆಟ್ರೋಲ್‌ನಲ್ಲಿ 5 ಸ್ಪೀಡ್ ಗಿಯರ್ ಬಾಕ್ಸ್ ಹೊಂದಿದ್ದರೆ, ಡೀಸೆಲ್‌ನಲ್ಲಿ 6 ಸ್ಪೀಡ್ ಗಿಯರ್‌ಬಾಕ್ಸ್ ಇದೆ. 1461 ಸಿಸಿಯ ಸಿಆರ್‌ಡಿಐ ಡೀಸೆಲ್ ಎಂಜಿನ್ 1759 ಆರ್‌ಪಿಎಂನಲ್ಲಿ 240 ಟಾರ್ಕ್ ಮತ್ತು 108 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಸದ್ಯ ಮ್ಯಾನುವಲ್ ಗಿಯರ್ ಆಪ್ಷನ್ ಮಾತ್ರ ಲಭ್ಯವಿದೆ. ಎಬಿಎಸ್, ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವ್ಯವಸ್ಥೆ, ಇಬಿಡಿ, ಬ್ರೇಕ್ ಅಸಿಸ್ಟ್, ಹಿಲ್‌ಸ್ಟಾರ್ಟ್ ಅಸಿಸ್ಟ್ ಇದರಲ್ಲಿರುವ ಹೆಚ್ಚುಗಾರಿಕೆ. ಮುಂಭಾಗ ಸ್ವತಂತ್ರ್ಯ ಸಸ್ಪೆನÒನ್‌ಗಳು, ಹಿಂಭಾಗ ಟ್ವಿಸ್ಟ್ ಬೀಮ್ ಶಾಕ್ಸ್ ಕ್ಯಾಪcರ್‌ನ ಮಾದರಿಯಲ್ಲೇ ಇವೆ.
Advertisement
ಕಿಕ್ಸ್ ಯಾರಿಗೆ ಬೆಸ್ಟ್?ನಿತ್ಯವೂ ತುಸು ದೀರ್ಘ ಪ್ರಯಾಣವಿದೆ. ವಾರಕ್ಕೊಮ್ಮೆ ಊರಾಚೆ ಓಡಾಟ, ತುಸು ಗಡಸು ದಾರಿಯಲ್ಲೂ ಆರಾಮ ಸವಾರಿ ಬೇಕು ಎನ್ನುವವರಿಗೆ ಕಿಕ್ಸ್ ಉತ್ತಮ ಆಯ್ಕೆಯಾಗಬಲ್ಲದು. ಹೆಚ್ಚಿನ ಟಾರ್ಕ್ ಇರುವುದರಿಂದ ನಗರದಲ್ಲೂ ಹೆಚ್ಚು ಕಿರಿಕಿರಿ ಇಲ್ಲದೆ ಡ್ರೈವ್ ಮಾಡಲು ಸಾಧ್ಯವಿದೆ. ಕಿಕ್ಸ್ ಶೀಘ್ರ ಮಾರುಕಟ್ಟೆಗೆ ಬರಲಿದ್ದು, ಕಂಪನಿ ಹೇಳುವಂತೆ ಇದರ ಬೆಲೆ 11 ರಿಂದ 14.50 ಲಕ್ಷ ರೂ. (ಎಕ್ಸ್‌ಷೋರೂಂ) ಆಗಿರಲಿದೆ. – ಈಶ