Advertisement

ನೀರವ್‌ ವಾಸ ಕುರಿತು ಖಚಿತಪಡಿಸಲಾಗದು

12:25 PM Mar 03, 2018 | Harsha Rao |

ವಾಷಿಂಗ್ಟನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 12,600 ಕೋಟಿ ರೂ. ಸುಸ್ತಿದಾರನಾಗಿರುವ ನೀರವ್‌ ಮೋದಿ ಅಮೆರಿಕದಲ್ಲಿದ್ದಾನೆ ಎನ್ನುವುದನ್ನು ಖಚಿತಪಡಿಸಲಾಗದು ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ. ನೀರವ್‌ ಬಗ್ಗೆ ವಿವಿಧ ಏಜೆನ್ಸಿಗಳು ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಅಮೆರಿಕ ನೆರವು ನೀಡುತ್ತದೆಯೇ ಎಂದು ಗೃಹ ಸಚಿವಾಲಯವನ್ನು ಕೇಳಿದ್ದಕ್ಕೆ, ಕಾನೂನು ಇಲಾಖೆ ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಲಿದೆ ಎಂದಿದೆ ಯಾದರೂ, ಕಾನೂನು ಇಲಾಖೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

Advertisement

ನೀರವ್‌ ನ್ಯೂಯಾರ್ಕ್‌ನಲ್ಲಿ ಇದ್ದಾರೆ ಎಂದು ಹೇಳಲಾಗಿದ್ದು, ಭಾರತಕ್ಕೆ ಮರಳಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಇಮೇಲ್‌ಗೆ ವಿದೇಶದಲ್ಲಿ ವ್ಯವಹಾರವಿರುವು ದರಿಂದ ವಿಚಾರಣೆಗೆ ಆಗಮಿಸಲಾಗದು ಎಂದಿದ್ದಾರೆ.

ಸಾಲ ವಸೂಲಾತಿಗೆ ಅಮೆರಿಕ ಕೋರ್ಟ್‌ ತಡೆ: ನೀರವ್‌ ಮೋದಿಯ ಕಂಪೆನಿಯ ಸಾಲ ವಸೂಲಾತಿ ಪ್ರಕ್ರಿಯೆಗೆ ಅಮೆರಿಕ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ಈಗಾಗಲೇ ಅಮೆರಿಕ ದಲ್ಲಿ ನೀರವ್‌ ದಿವಾಳಿ ಘೋಷಣೆ ಅರ್ಜಿ ಸಲ್ಲಿಸಿ ದ್ದಾರೆ. ಈ ಹಿನ್ನೆಲೆಯಲ್ಲಿ ವಹಿವಾಟು ಮುಂದುವರಿಸುವುದಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಕೋರ್ಟ್‌ ಆದೇಶ ನೀಡಿದೆ. ಇದು ಅಮೆರಿಕ ನ್ಯಾಯಾಲಯದ ವ್ಯಾಪ್ತಿಯಲ್ಲಿನ ನೀರವ್‌ ಸ್ವತ್ತಿಗೆ ಮಾತ್ರ ಅನ್ವಯವಾಗುತ್ತಿದೆ ಎನ್ನಲಾಗಿದ್ದು, ಭಾರತದಲ್ಲಿ ಸಿಬಿಐ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ನಡೆಸುತ್ತಿರುವ ವಿಚಾ ರಣೆ ಮೇಲೆ ಯಾವುದೇ ಪರಿಣಾಮ ಬೀರದು. ಆದರೆ ವಿದೇಶದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪ್ರಯತ್ನ ಈ ಆದೇಶದಿಂದ ವಿಫ‌ಲವಾದಂತಾಗಿದೆ.

ದಕ್ಷಿಣ ಭಾರತದಲ್ಲೇ ಹೆಚ್ಚು ಬ್ಯಾಂಕಿಂಗ್‌ ಅವ್ಯ ವ ಹಾರ: ಬ್ಯಾಂಕ್‌ ಅಧಿಕಾರಿಗಳೇ ಶಾಮೀಲಾಗಿ ನಡೆಸಿರುವ ಅವ್ಯವಹಾರ ಪ್ರಕರಣಗಳಲ್ಲಿ ದಕ್ಷಿಣ ಭಾರತವೇ ಮುಂಚೂಣಿಯಲ್ಲಿದೆ ಎಂದು ಆರ್‌ಬಿಐ ದತ್ತಾಂಶ ಆಧರಿಸಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. ಎಪ್ರಿಲ್‌ 2013ರಿಂದ ಜೂನ್‌ 2016ರ ವರೆಗಿನ ದತ್ತಾಂ ಶದ ಪ್ರಕಾರ, ಬ್ಯಾಂಕ್‌ ಉದ್ಯೋಗಿಗಳೂ ಶಾಮೀಲಾಗಿರುವ 1232 ಮೋಸದ ಪ್ರಕರಣಗಳು ದಾಖಲಾಗಿದ್ದು, ಇದರಿಂದ 2450 ಕೋಟಿ ರೂ. ನಷ್ಟವಾಗಿದೆ.ಈ ಎಲ್ಲ ಪ್ರಕರಣಗಳೂ 1ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ್ದಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಶೇ. 49ರಷ್ಟು ಪ್ರಕರಣಗಳು ಕಂಡುಬಂದಿದೆ. ಆದರೆ ಮೊತ್ತ ಶೇ.19ರಷ್ಟಾಗಿದೆ (462 ಕೋಟಿ ರೂ.). ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ನಂತರದ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next