Advertisement

Nirup Bhandari; ಸತ್ಯ ಸನ್‌ಆಫ್ ಹರಿಶ್ಚಂದ್ರ! ಇದು ನಿರೂಪ್‌ ಚಿತ್ರ

05:26 PM Aug 16, 2024 | Team Udayavani |

ನಾಯಕ ನಟ ನಿರೂಪ್‌ ಭಂಡಾರಿ ಅವರ ಹೊಸ ಚಿತ್ರ “ಸತ್ಯ ಸನ್‌ ಆಫ್ ಹರಿಶ್ಚಂದ್ರ’ದ ಪಾತ್ರ ಪರಿಚಯದ ವಿಡಿಯೋ ತುಣುಕನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ಸುಳ್ಳನ ಕಥೆ. ಸಾಯಿ ಕುಮಾರ್‌ ಪ್ರತಿರೋಧಕ್ಕೆ, ನಾನು ಹರಿಶ್ಚಂದ್ರನ ಮಗನಿರಬಹುದು. ಆದರೆ ಸತ್ಯ ಹರಿಶ್ಚಂದ್ರನ ತುಂಡಲ್ಲ ಎಂದು ನಿರೂಪ್‌ ಭಂಡಾರಿ ಅಬ್ಬರಿಸುತ್ತಾರೆ. ಇದು ಸತ್ಯ ಮತ್ತು ಸುಳ್ಳಿನ ಮಧ್ಯದ ತೀವ್ರ ಸಂಘರ್ಷವನ್ನು ಸೂಚಿಸುತ್ತದೆ.

Advertisement

“ರಂಗಿತರಂಗ’ ಚಿತ್ರದ ನಂತರ ಮತ್ತೆ ಒಂದಾಗಿರುವ ಡೈಲಾಗ್‌ ಕಿಂಗ್‌ ಸಾಯಿ ಕುಮಾರ್‌ ಮತ್ತು ನಿರೂಪ್‌ ಭಂಡಾರಿ ತಂದೆ-ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಜುಗಲ್ಬಂದಿಯಲ್ಲಿ ಮತ್ತೂಮ್ಮೆ ಅನಿರೀಕ್ಷಿತ ಹಾಗೂ ರೋಚಕ ದೃಶ್ಯಗಳನ್ನು ನಿರೀಕ್ಷಿಸಬಹುದು. ಹಾಸ್ಯದ ಹೊನಲಿನ ಮಧ್ಯೆ ಭಾವನೆಗಳ ನ್ಪೋಟಗೊಳ್ಳುವುದರಿಂದ ಇದು ಕ್ಲಾಸ್‌ ಮತ್ತೆ ಮಾಸ್‌ ಗೆ ಇಷ್ಟವಾಗುವ ಚಿತ್ರವಾಗಬಲ್ಲದು ಎಂಬ ವಿಶ್ವಾಸ ತಂಡದ್ದು.

ಈ ಚಿತ್ರವನ್ನು ಪೂನಾ ಮೂಲದ ಅಂಕಿತ್‌ ಸೋನೇಗಾರ್‌ ಅವರು ಅಂಕಿತ್‌ ಸಿನಿಮಾಸ್‌ ಬ್ಯಾನರ್‌ನಡಿ ಪ್ರಶಾಂತ್‌ ಮುಲಗೆ ಸಹ ನಿರ್ಮಾಣದೊಂದಿಗೆ ನಿರ್ಮಿಸಿದ್ದಾರೆ.

ತಾರಾಗಣದಲ್ಲಿ ಬೃಂದಾ ಆಚಾರ್ಯ, ಅಂಕಿತ ಅಮರ್‌, ಸ್ವಾತಿ ಗುರುದತ್‌, ಎಂ.ಕೆ. ಮಠ, ಚೇತನ್‌ ದುರ್ಗ ಮುಂತಾದರಿದ್ದಾರೆ. ಈ ಚಿತ್ರಕ್ಕೆ ಸಚಿನ್‌ ವಾಲಿ ನಿರ್ದೇಶನ, ಸಂದೀಪ್‌ ವಲ್ಲೂರಿ ಛಾಯಾಗ್ರಹಣ, ಸಚಿನ್‌ ಬಸ್ರೂರು ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next