Advertisement
ಬಂಟ್ವಾಳ: ಕಾಶ್ಮೀರದ ಸಂಸ್ಕೃತ ಕವಿ ಕಲ್ಹಣನ ರಾಜತರಂಗಿಣಿ ಎಂಬ ಮಹಾನ್ ಕಾವ್ಯವನ್ನು ಸಂಸ್ಕೃತದಿಂದ ಗದ್ಯರೂಪದಲ್ಲಿ ಕನ್ನಡಕ್ಕೆ ಅನುವಾದಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಸಾಹಿತ್ಯ ನೀರ್ಪಾಜೆ ಭೀಮ ಭಟ್ಟರು “ಕನ್ನಡದ ಕಲ್ಹಣ’ ಎಂಬ ಬಿರುದಿನಿಂದಲೇ ಖ್ಯಾತಿ ಗಳಿಸಿದ್ದಾರೆ. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ನೀರ್ಪಾಜೆಯಲ್ಲಿ ಜನಿಸಿದ ಅವರು ಬಂಟ್ವಾಳ ತಾಲೂಕಿನ ಹೆಮ್ಮೆ ಎನಿಸಿಕೊಂಡಿದ್ದಾರೆ.
ನೀರ್ಪಾಜೆ ಭೀಮ ಭಟ್ಟರು ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯ ಕೃಷಿ ಆರಂಭಿಸಿದ್ದು, ಕಾಶ್ಮೀರ ಸಂಧಾನ ಸಮುದ್ಯಮ ಎಂಬ ಕೃತಿ ರಚಿಸಿದ್ದರು. ಹೈದರಾಬಾದ್ ವಿಜಯಂ, ಗೋವಾ ಸ್ವತಂತ್ರಂ ಮುಂತಾದ ನಾಟಕಗಳನ್ನು ರಚಿಸಿದ್ದರು. ಮಾಲತಿ ಮಾಧವ, ಮಣ್ಣಿನ ಬಂಡಿ, ಮಾಳವಿಕಾಗ್ನಿ ಮಿತ್ರ, ಊರ್ವಶಿ ಪ್ರಮುಖ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
Related Articles
Advertisement
ಚೌ ಚೌ, ಚಿತ್ರಾನ್ನ, ಶೂನ್ಯವೇಳೆ, ಸೋತು ಗೆದ್ದವರು, ನಾಮದ ಫಲ, ಹೆಂಡತಿ ಮತ್ತು ಪೆಟ್ಟು ಮುಂತಾದವು ಅವರ ಅಂಕಣ ಬರಹಗಳ ಸಂಕಲನ ಕೃತಿಗಳಾಗಿ ಮೂಡಿಬಂದಿವೆ. ಹಸ್ತ ಶುದ್ಧಿ, ರಸವತ್, ಮನನ, ಸಾಹಿತ್ಯ ಪ್ರಜ್ಞೆ, ಯುಗ ಪುರುಷ ಉಡುಪರು, ಕಾಳಿದಾಸ ಸಮೀಕ್ಷೆ ಮುಂತಾದ ಹಲವಾರು ಕೃತಿಗಳನ್ನು ನೀರ್ಪಾಜೆಯವರು ಬರೆದಿದ್ದಾರೆ.ರಾಜಕೀಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿರುವ ಅವರು ಮಂಡಲ, ಗ್ರಾ.ಪಂ.ಅಧ್ಯಕ್ಷರಾಗಿ ದುಡಿದಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಭ್ಯುದಯ ಪ್ರಕಾಶನ ಮೂಲಕ ಹಲವು ಕೃತಿಗಳನ್ನು ಪ್ರಕಟಿಸಿದ್ದು, 2002ರ ಡಿ. 12ರಂದು ಅವರು ಇಹಲೋಕವನ್ನು ತ್ಯಜಿಸಿದ್ದರು. ಅಭಿಮಾನಿ ಬಳಗ ಸಕ್ರಿಯ
ಬಂಟ್ವಾಳ ತಾಲೂಕಿನಲ್ಲಿ ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗವೊಂದಿದ್ದು, ಈ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ವರ್ಷಕ್ಕೆ ಒಬ್ಬರಿಗೆ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಕಾರ್ಯವೂ ನಡೆಯುತ್ತಿದೆ. ಸ್ಮಾರಕ ನಿರ್ಮಾಣವಾಗಲಿ
ಕನ್ನಡ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡಿದ ನೀರ್ಪಾಜೆ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಿಲ್ಲ. ಹುಟ್ಟೂರು ಕನ್ಯಾನದ ರಸ್ತೆಯೊಂದಕ್ಕೆ ನೀರ್ಪಾಜೆ ಭೀಮ ಭಟ್ಟರ ಹೆಸರಿಡಲಾಗಿದೆ. ಹೀಗಾಗಿ ಸರಕಾರ, ಸಾಹಿತ್ಯ ಪ್ರೇಮಿಗಳು ಅಥವಾ ಸ್ಥಳೀಯಾಡಳಿತ ನೀರ್ಪಾಜೆಯವರ ಹೆಸರಿನಲ್ಲಿ ತಾಲೂಕು ಕೇಂದ್ರ ಅಥವಾ ಅವರ ಹುಟ್ಟೂರಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಲು ಮುಂದಾಗಬೇಕಿದೆ. ನೀರ್ಪಾಜೆ ಭೀಮ ಭಟ್ಟರು