ಹೊಸದಿಲ್ಲಿ: ದೇಶದ ಪ್ರಮುಖ ಹಿಂದೂ ಧಾರ್ಮಿಕ ಗುಂಪಾದ ನಿರ್ಮೋಹಿ ಅಖಾಡದ ಮಹಂತ್ ಭಾಸ್ಕರ್ ದಾಸ್ ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು.
ದಾಸ್ ಅವರಿಗೆ ಇದು ಮೂರನೇ ಬಾರಿ ಆದ ಹೃದಯಾಘಾತವಾಗಿದ್ದು, ಈ ಹಿಂದೆ 2003 ಮತ್ತು 2007 ರಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ವಿವಾದಿತ ರಾಮಜನ್ಮಭೂಮಿಯ ಮೂರು ವಾರಸುದಾರರ ಪೈಕಿ ನಿರ್ಮೋಹಿ ಅಖಾಡವೂ ಒಂದಾಗಿದೆ.
ಕುಸಿದು ಬಿದ್ದ ತಕ್ಷಣ ಅವರನ್ನು ಫರೀದಾಬಾದ್‌ನ ಹರ್ಷನ್ ಹೃದಯ ಸಂಸ್ಥಾನದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅದಾಗಲೇ ಇಹಲೋಕ ತ್ಯಜಿಸಿದ್ದರು.
1929 ರಲ್ಲಿ ಗೋರಖ್‌ಪುರದಲ್ಲಿ ಜನಿಸಿದ್ದ ದಾಸ್ ಅವರು 1946 ರಲ್ಲಿ ಅಯೋಧ್ಯೆಗೆ ಬಂದಿದ್ದರು. ರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿದ್ದರು.
ಅಲಹಬಾದ್ ಹೈಕೋರ್ಟ್ ಸ್ಪಷ್ಟವಾಗಿದೆ. 2.17 ಎಕರೆ ವಿವಾದಗ್ರಸ್ತ ಭೂಮಿಯನ್ನು ರಾಮ ಲಲ್ಲಾ, ನಿರ್ಮೋಹಿ ಆಖಾಡ ಮತ್ತು ವಕ್ಫ್ ಮಂಡಳಿಗೆ ಸಮಾನವಾಗಿ ಹಂಚಿ ತೀರ್ಪು ಕೊಟ್ಟಿತ್ತು.