Advertisement

ನಿರ್ಮಲಾನಂದನಾಥ ಶ್ರೀ ಭೇಟಿಯಾದ ಪರಂ

11:59 AM May 19, 2017 | Team Udayavani |

ಬೆಂಗಳೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿಯನ್ನು ಗುರುವಾರ ಸಂಜೆ ಭೇಟಿ ಮಾಡಿ ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.  ವಿಜಯನಗರದಲ್ಲಿರುವ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್‌, ನಾನು ಮಠಕ್ಕೆ ರಾಜಕೀಯ ಮಾತನಾಡಲು ಸ್ವಾಮೀಜಿ ಬಳಿ ಬಂದಿಲ್ಲ.

Advertisement

ನಾನು ಸುಮಾರು 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಚೆನ್ನಾಗಿ ನಡೆಯಬೇಕೆಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಸಲಹೆ ಪಡೆದಿದ್ದೇನೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರ ಹುದ್ದೆ ಯಾವ ಸಂದರ್ಭದಲ್ಲಿ ಯಾರಿಗೆ ನೀಡಬೇಕೆಂದು ಹೈಕಮಾಂಡ್‌ ನಿರ್ಧರಿಸುತ್ತದೆ.

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಬಿಜೆಪಿಯವರ ಬರ ಅಧ್ಯಯನ ಪ್ರವಾಸದಲ್ಲಿ ರಾಜಕೀಯ ಬಿಟ್ಟು ಬೇರೇನೂ ಕಾಣುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಮಳೆ ಆರಂಭವಾಗಿದೆ. ಬಿಜೆಪಿಯವರು ಕೇಂದ್ರದ ತಂಡ ಬಂದಾಗ ರಾಜ್ಯದ ಬರ ಮಾಹಿತಿ ಒದಗಿಸಿ ಪರಿಹಾರ ಕೊಡಿಸಬೇಕಿತ್ತು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಕೇಳಿದಷ್ಟು ಹಣ ನೀಡಿಲ್ಲ ಎಂದು ದೂರಿದರು. 

Advertisement

Udayavani is now on Telegram. Click here to join our channel and stay updated with the latest news.

Next