Advertisement
ಅವರು ಶನಿವಾರ ಉಡುಪಿಯಲ್ಲಿ ಮಣಿಪಾಲದ ಟಿ.ಎ. ಪೈ ಮ್ಯಾನೇಜೆ¾ಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ)ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿ ದ್ದಾರೆ. ಇದಕ್ಕೆ ಮುನ್ನ ಕುಕ್ಕಿಕಟ್ಟೆಯಲ್ಲಿ ಶ್ರೀವಿಶ್ವೇಶ ತೀರ್ಥ ಧಾಮವನ್ನು ಉದ್ಘಾಟಿಸಲಿರುವರು. ವಿತ್ತ ಸಚಿವೆ ಯಾದ ಬಳಿಕ ಇದು ನಿರ್ಮಲಾ ಅವರ ಪ್ರಥಮ ಉಡುಪಿ-ಮಣಿಪಾಲ ಭೇಟಿ.
Related Articles
Advertisement
ಪ್ರಸ್ತುತ ಜಿಎಸ್‌ಟಿ ದರ ಏರಿಕೆ, ಇತ್ತೀಚೆಗೆ ಆರ್‌ಬಿಐ ಸಾಲದ ಬಡ್ಡಿದರವನ್ನು ಏರಿಸಿರುವುದು, ಶ್ರೀಲಂಕಾ, ನೇಪಾಲದಲ್ಲಿ ಹದಗೆಟ್ಟ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ, ಪಾಕಿಸ್ಥಾನದ ನಿರಂತರ ಕಿರಿಕಿರಿ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಇತ್ಯಾದಿ ವಿಷಯಗಳ ಕುರಿತು ಕೇಂದ್ರ ಸರಕಾರ ತಳೆಯುವ ನಿರ್ಧಾರಗಳ ಹಿಂದೆ ವಿತ್ತ ಸಚಿವರ ಪ್ರಧಾನ ಪಾತ್ರವಿದೆ. ಕೋವಿಡ್‌ನಂತಹ ಸಂದರ್ಭದಲ್ಲಿ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆಯೂ ಇವರಿಗಿದೆ.
ಉಡುಪಿ ಪ್ರವಾಸ ವಿವರ
– ಶನಿವಾರ ಬೆಳಗ್ಗೆ 6ಕ್ಕೆ ಶ್ರೀಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ, ಪೂಜೆ. ಈ ಹಿಂದೆ ಉಡುಪಿಗೆ ಬಂದಿದ್ದಾಗಲೂ ಮುಂಜಾವದ ವಿಶ್ವರೂಪ ದರ್ಶನ ಪೂಜೆಯಲ್ಲಿ ಪಾಲ್ಗೊಂಡಿದ್ದರು.
-ಬೆಳಗ್ಗೆ 9.20ಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ಪೂಜೆ.
-ಅಪರಾಹ್ನ 2.30ಕ್ಕೆ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀವಿಶ್ವೇಶ ತೀರ್ಥ ಸೇವಾ ಧಾಮ ಉದ್ಘಾಟನೆ.
-ಸಂಜೆ 4ಕ್ಕೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಟ್ಯಾಪ್ಮಿ ಘಟಿಕೋತ್ಸವದಲ್ಲಿ ಭಾಗಿ.