Advertisement

ರಕ್ಷಣಾ ಸಚಿವೆಯಾಗಿ ನಿರ್ಮಲಾ ಪದಗ್ರಹಣ

06:10 AM Sep 08, 2017 | Team Udayavani |

ಹೊಸದಿಲ್ಲಿ: ದೇಶದ ಮೊತ್ತಮೊದಲ ಪೂರ್ಣಪ್ರಮಾಣದ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಈ ಹೊಣೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದ ಕೇಂದ್ರ ಸಚಿವ ಅರುಣ್‌ ಜೇಟಿÉ ಅವರಿಂದ ಅಧಿಕಾರ ಪಡೆದುಕೊಂಡ ನಿರ್ಮಲಾ ಅವರು, ತಾವು ದಿನದ 24 ಗಂಟೆಯೂ ರಕ್ಷಣಾ ಸಚಿವೆಯಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದಿದ್ದಾರೆ. “ಸೇನಾ ಸನ್ನದ್ಧತೆ, ರಕ್ಷಣಾ ಒಪ್ಪಂದಗಳ ತ್ವರಿತ ಅನುಷ್ಠಾನ, ಯೋಧರ ಕ್ಷೇಮಾಭಿವೃದ್ಧಿ ಹಾಗೂ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಮೇಕ್‌ ಇನ್‌ ಇಂಡಿಯಾಗೆ ಹೆಚ್ಚಿನ ಒತ್ತು ಕೊಡುತ್ತೇನೆ’  ಎಂದೂ ಹೇಳಿದ್ದಾರೆ.

ಅಧಿಕಾರ ವಹಿಸುವ ಮುನ್ನ ಅವರ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ವೇಳೆ ನಿರ್ಮಲಾ ಅವರ ಹೆತ್ತವರೂ ಉಪಸ್ಥಿತರಿದ್ದರು. ವಿಶೇಷವೆಂದರೆ, ಅಧಿಕಾರ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ನಿರ್ಮಲಾ ಅವರು 8,685 ನಿವೃತ್ತ ಯೋಧರು, ವಿಧವೆಯರು ಹಾಗೂ ಅವಲಂಬಿತರಿಗೆ ಸಶಸ್ತ್ರ ಪಡೆಯ ಧ್ವಜ ದಿನದ ನಿಧಿಯಿಂದ 13 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಕಡತಕ್ಕೆ ಸಹಿ ಹಾಕಿದರು. ಜತೆಗೆ, ರಕ್ಷಣಾ ಮಂತ್ರಿ ನಿವೃತ್ತ ಯೋಧರ ನಿಧಿಯಿಂದ ಹಣಕಾಸು ನೆರವಿಗೂ ಒಪ್ಪಿಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next