Advertisement

ಆರ್ಥಿಕ ಸುಧಾರಣೆ ಮುಂದುವರಿಯಲಿದೆ: ನಿರ್ಮಲಾ ಸೀತಾರಾಮನ್‌

01:19 AM Nov 24, 2020 | sudhir |

ಹೊಸದಿಲ್ಲಿ: ಭಾರತದಲ್ಲಿ ಆರ್ಥಿಕ ಸುಧಾರಣೆಗಳು ಸತತವಾಗಿ ಮುಂದುವರಿಯಲಿವೆ ಎಂದು ಕೈಗಾರಿಕೋದ್ಯಮಿಗಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ.

Advertisement

ಭಾರತ ಕೈಗಾರಿಕಾ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ದೇಶದ ಬಹುರಾಷ್ಟ್ರೀಯ ಕಂಪನಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಕೊರೊನಾದಂತಹ ವಿಷಮಸ್ಥಿತಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಸುಧಾರಣೆ ಮಾಡುವ ಅವಕಾಶವನ್ನು ಬಿಟ್ಟುಕೊಡಲಿಲ್ಲ.

ದಶಕಗಳ ಕಾಲ ಸಾಧ್ಯವಾಗದೇ ಇದ್ದ ಯೋಜನೆಗಳನ್ನೆಲ್ಲ ಅವರು ಕೈಗೆತ್ತಿಕೊಂಡಿದ್ದಾರೆ. ಕೇಂದ್ರಸರಕಾರ ವೃತ್ತಿಪರವಾಗಿ ಯೋಚಿಸುತ್ತಿದೆ. ತಾನು ಹೂಡಿರುವ ಬಂಡವಾಳ ಹಿಂತೆಗೆದುಕೊಳ್ಳುತ್ತಿದೆ. ಅಂದರೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರು ತಮ್ಮ ಮೊದಲ ಅವಧಿಯಲ್ಲೂ ಹಲವು ಆರ್ಥಿಕ ಸುಧಾರಣೆ ಮಾಡಿದ್ದರು. ಜಿಎಸ್‌ಟಿ ಜಾರಿ, ತಂತ್ರಜ್ಞಾನ ಬಳಸಿ ಹಣ ನೇರವಾಗಿ ಖಾತೆಗೆ ಹಾಕಿದ್ದು, ದಿವಾಳಿ ಮತ್ತು ಭ್ರಷ್ಟಾಚಾರ ನೀತಿಯನ್ನು (ಐಬಿಸಿ) ಸಿದ್ಧಪಡಿಸಿದ್ದೆಲ್ಲ ಈ ವ್ಯಾಪ್ತಿಗೆ ಬರುತ್ತದೆ ಎಂದು ನಿರ್ಮಲಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next