ಪ್ರೀತಿ, ಮುನಿಸು, ಕಾತರ, ಕೊನೆಗೊಂದು ನಿಟ್ಟುಸಿರು – ಇವೆಲ್ಲದರ ಒಟ್ಟು ಮೊತ್ತ “ನಿನ್ನ ಸನಿಹಕೆ’. ನಿನ್ನ ಸನಿಹಕೆ ಚಿತ್ರ ಒಂದು ಲವ್ ಸ್ಟೋರಿ. ಹಾಗಂತ ಇದು ಕೇವಲ ಲವ್ ಸ್ಟೋರಿಗೆ ಸೀಮಿತವಾಗಿಲ್ಲ. ಇವತ್ತಿನ ಯುವ ಪೀಳಿಗೆಯ ಮನಸ್ಥಿತಿಯನ್ನು ಬಿಂಬಿಸುವ ಒಂದು ಪ್ರಯತ್ನ ಕೂಡ ಈ ಚಿತ್ರದಲ್ಲಿ ನಡೆದಿದೆ. ಸಮಾಜ ಇನ್ನೂ ಒಪ್ಪಿಕೊಳ್ಳದ ಲಿವಿಂಗ್ ರಿಲೇಶನ್‌ಶಿಪ್ ಎಂಬ ಅಂಶವನ್ನು ಈ ಚಿತ್ರದಲ್ಲಿ ಸೇರಿಸುವ ಮೂಲಕ ಒಂದು ವಿಭಿನ್ನ ಪ್ರಯೋಗ ಮಾಡಿದ್ದಾರೆ ಸೂರಜ್.
ಮೊದಲ ಬಾರಿಗೆ ಸಿನಿಮಾ ಮಾಡುವ ಒಬ್ಬ ನಿರ್ದೇಶಕನಿಗೆ ಇಂತಹ ಸಬ್ಜೆಕ್ಟ್ ಅನ್ನು ನಿಭಾಯಿಸೋದು ಸ್ವಲ್ಪ ಕಷ್ಟವೇ ಸರಿ. ಆದರೆ ನಿರ್ದೇಶಕ ಸೂರಜ್, ಯಾವುದನ್ನು ಅತಿಯಾಗಿ ಮಾಡದೆ, ಇಡೀ ಕಥೆಯನ್ನು ನೀಟಾಗಿ ಕಟ್ಟಿಕೊಡುವ ಮೂಲಕ ಭರವಸೆ ಮೂಡಿಸಿದ್ದಾರೆ.
“ನಿನ್ನ ಸನಿಹಕೆ’ ಒಂದು ಪಕ್ಕ ಕಮರ್ಷಿಯಲ್ ಸಿನಿಮಾ. ಲವ್ ಸ್ಟೋರಿ ಜೊತೆಗೆ ಒಂದಷ್ಟು ಆ್ಯಕ್ಷನ್, ಸೆಂಟಿಮೆಂಟ್ ಅಂಶಗಳಿಗೂ ಇಲ್ಲಿ ಜಾಗ ಕೊಡಲಾಗಿದೆ.
ಸಿಟಿಯಲ್ಲಿ ಕೆಲಸ ಮಾಡುತ್ತಿರುವ ಯುವಕ ಯುವತಿ ಪ್ರೀತಿಗೆ ಬಿದ್ದು ಮುಂದೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿರುವ್ ಅವರಿಗೆ ಎದುರಾಗುವ ಸವಾಲುಗಳು, ಭಿನ್ನಾಭಿಪ್ರಾಯ, ಮುಂದೆ ಅದು ಪಡೆದುಕೊಳ್ಳುವ ಗಂಭೀರ ಸ್ವರೂಪ… ಇಂತಹ ಅಂಶಗಳೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಚಿತ್ರ ನಿಮಗೆ ಬೋರ್ ಹೊಡೆಸುವುದಿಲ್ಲ. ಕೆಲವು ಜಾಗಗಳಲ್ಲಿ ಚಿತ್ರ ವೇಗ ಕಳೆದುಕೊಳ್ಳುತ್ತಿದೆ, ಇನ್ನೇನು ಬೇಕಿತ್ತು ಎಂಬ ಭಾವನೆ ಆಗಾಗ ಬರುವುದು ಬಿಟ್ಟರೆ, ಮಿಕ್ಕಂತೆ ನಿನ್ನ ಸನಿಹಕೆ ಪ್ರಯತ್ನವನ್ನು ಇಷ್ಟವಾಗುತ್ತದೆ.
ನಾಯಕ ಸೂರಜ್ ಗೌಡ ಒಂದೇ ಚಿತ್ರದಲ್ಲಿ ಎರಡೆರಡು ಜವಾಬಾœರಿ ಹೊತ್ತು ಕೊಂಡಿದ್ದಾರೆ. ನಟರಾಗಿ ಇಷ್ಟವಾಗುವ ಜೊತೆಗೆ ನಿರ್ದೇಶಕರಾಗಿ ಮೆಚ್ಚುಗೆ ಪಡೆಯುತ್ತಾರೆ. ಲವರ್ ಬಾಯ್, ಆಕ್ಷನ್ ಹೀರೋ.. ಪ್ರತಿ ದೃಶ್ಯದಲ್ಲೂ ಗಮನ ಸೆಳೆಯುತ್ತಾರೆ.
ಇನ್ನು ನಾಯಕಿಯಾಗಿ ನಟಿಸಿರುವ ಧನ್ಯಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಪ್ರೀತಿ, ಕೋಪ, ತನ್ನವರನ್ನು ಕಳೆದುಕೊಳ್ಳುವ ನೋವು… ಇಂತಹ ದೃಶ್ಯಗಳಲ್ಲಿ ಧನ್ಯಾ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಇನ್ನು ಚಿತ್ರದ ಹಾಡುಗಳು ಕತೆಗೆ ಪೂರಕ