Advertisement
ರಾಜ್ಯದಲ್ಲಿ ಸೋಂಕಿತರ ಸಾವು ಹತ್ತು ಸಾವಿರ ಗಡಿದಾಟಿವೆ. ರಾಜ್ಯಕ್ಕೆ ಕೋವಿಡ್ ಸೋಂಕು ಕಾಲಿಟ್ಟು ಏಳು ತಿಂಗಳಾಗಿದ್ದು, ಈ ಪೈಕಿ ಮೊದಲ ನಾಲ್ಕು ತಿಂಗಳಲ್ಲಿ (ಮಾರ್ಚ್ 12ರಿಂದ ಜುಲೈ 12) 757 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ನಂತರದ ಮೂರು ತಿಂಗಳಲ್ಲಿ (ಜುಲೈ 13 ರಿಂದ ಅಕ್ಟೋಬರ್ 12) ಬರೋಬ್ಬರಿಗೆ 9,279 ಸೋಂಕಿತರ ಸಾವಾಗಿದೆ. ಅಂದರೆ, ಕಳೆದ ಮೂರು ತಿಂಗಳಲ್ಲಿ ನಿತ್ಯ ಸರಾರಸರಿ 101 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎನ್ನುತ್ತಿವೆ ಅಂಕಿ ಅಂಶಗಳು.
ಈವರೆಗೂ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ.76 ರಷ್ಟು ಅಂದರೆ, 7,600 ಮಂದಿ 50 ವರ್ಷ ಮೇಲ್ಪಟ್ಟವರು. ಇದರಲ್ಲಿಯೇ 5,200 ಮಂದಿ (ಶೇ.50ರಷ್ಟು) 60 ವರ್ಷ ಮೇಲ್ಪಟ್ಟವರರಾಗಿದ್ದಾರೆ. ಉಳಿದಂತೆ 41-50 ವರ್ಷದವರು ಶೇ. 13.5, 31 ರಿಂದ 40 ವರ್ಷದ ವಯಸ್ಕರು ಶೇ.6, 21 ರಿಂದ 30 ವರ್ಷದವರು ಶೇ.2, 11 ರಿಂದ 20 ವರ್ಷದವರು ಶೇ. 0.4, 0- 10 ವರ್ಷದ ಮಕ್ಕಳ 0.2 ರಷ್ಟಿದೆ.
Related Articles
Advertisement
ಐದು ಜಿಲ್ಲೆಗಳಲ್ಲಿ ಹೆಚ್ಚು ಮರಣ ದರರಾಜ್ಯದ ಐದು ಜಿಲ್ಲೆಗಳಲ್ಲಿ ಮರಣ ದರ (100 ಸೋಂಕಿತರಿಗೆ ಇಂತಿಷ್ಟು ಮಂದಿ ಸಾವು) ಶೇ. 2ಕ್ಕಿಂತಲೂ ಹೆಚ್ಚಿದೆ. ಧಾರವಾಡ ಶೇ 2.8, ಬೀದರ್ ಶೇ 2.4, ದಕ್ಷಿಣ ಕನ್ನಡ ಶೇ.2.3, ಮೈಸೂರು ಶೇ 2.1, ಕೊಪ್ಪಳ ಶೇ.2. ದೇಶದ ಮೊದಲ ಸಾವು ವರದಿಯಾಗಿ ಸೋಮವಾರಕ್ಕೆ ಏಳು ತಿಂಗಳು!
ದೇಶದಲ್ಲಿಯೇ ಕೋವಿಡ್ ಸೋಂಕಿಗೆ ಮೊದಲ ಸಾವಾಗಿದ್ದು ಕರ್ನಾಟಕದ ಕಲಬುರಗಿ ನಗರದಲ್ಲಿ. ಮಾರ್ಚ್ 10 ರಂದು ಮೃತಪಟ್ಟಿದ್ದ 76 ವರ್ಷದ ವೃದ್ಧನಿಗೆ ಸೋಂಕು ತಗುಲಿತ್ತು ಎಂದು ಘೋಷಣೆಯಾಗಿದ್ದು ಮಾರ್ಚ್ 12 ರಂದು. ಸೋಮವಾರಕ್ಕೆ (ಅಕ್ಟೋಬರ್ 12) ಕೊರೊನಾ ಸೋಂಕಿತರ ಮೊದಲ ಸಾವು ವರದಿಯಾಗಿ ಏಳು ತಿಂಗಳಾಗಲಿದೆ. ಇದೇ ಸಂದರ್ಭದಲ್ಲಿ ಒಟ್ಟಾರೆ ಸಾವು ಕೂಡಾ ಹತ್ತು ಸಾವಿರಕ್ಕೆ ತಲುಪಿದೆ.
ಸೋಂಕಿತ ಸಾವು | 1000 | 2000 | 3000 | 4000 | 5000 | 6000 | 7000 | 8000 | 9000 |
ದಿನಾಂಕ | ಜುಲೈ 16 | ಜುಲೈ 28 | ಆಗಸ್ಟ್ 8 | ಆಗಸ್ಟ್ 17 | ಆಗಸ್ಟ್ 26 | ಸಪ್ಟೆಂಬರ್ 3 | ಸಪ್ಟೆಂಬರ್ 11 | ಸಪ್ಟೆಂಬರ್ 20 | ಅಕ್ಟೋಬರ್ 2 |