Advertisement

Nagpur: ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಅವಘಡದಲ್ಲಿ 9 ಮಂದಿ ಮೃತ್ಯು

08:42 PM Dec 17, 2023 | Vishnudas Patil |

 

Advertisement

ನಾಗ್ಪುರ: ಮಹಾರಾಷ್ಟ್ರದ ಚಕ್ದೋಹ್‌ನಲ್ಲಿರುವ ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ 9 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಆಶಿಶ್ ಶ್ರೀವಾಸ್ತವ ಹೇಳಿಕೆ ನೀಡಿದ್ದು “ಬೆಳಗ್ಗೆ 9 ಗಂಟೆಗೆ ಮಿಕ್ಸಿಂಗ್, ಮೆಲ್ಟಿಂಗ್ ಮತ್ತು ಎರಕಹೊಯ್ಯುವ ಕಟ್ಟಡದಲ್ಲಿ ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಭವಿಷ್ಯದಲ್ಲಿ ಎಲ್ಲಾ ಬೆಂಬಲ ಮತ್ತು ಪರಿಹಾರವನ್ನು ಒದಗಿಸಲು ಕಂಪನಿಯು ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಎಲ್ಲಾ ಕಾರ್ಮಿಕರನ್ನು ಕಟ್ಟಡದಿಂದ ಸ್ಥಳಾಂತರಿಸಲಾಗಿದೆ. ಅವಘಡ ನಡೆದಾಗ ಘಟಕದಲ್ಲಿ 12 ಮಂದಿ ಇದ್ದರು ಎಂದು ಕೊಂಧಳಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next