Advertisement

ಯವತ್‌ಮಾಳ್‌ ನಲ್ಲಿ ಭೀಕರ ಅಪಘಾತ ; 9 ಮಂದಿ ದುರ್ಮರಣ 

09:35 AM Dec 26, 2018 | |

ಯವತ್‌ಮಾಳ್‌ (ಮಹಾರಾಷ್ಟ್ರ): ಕ್ರೂಸರ್‌ ಎಸ್‌ಯುವಿ ವಾಹನವೊಂದು ಗ್ಯಾಸ್‌ ಟ್ಯಾಂಕರ್‌ಗೆ ಢಿಕ್ಕಿಯಾಗಿ 9 ಮಂದಿ ದಾರುಣವಾಗಿ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಮಂಗಳವಾರ ತಡರಾತ್ರಿ ನಾಗಪುರ-ಯವತ್‌ಮಾಳ ಹೆದ್ದಾರಿಯಲ್ಲಿ ನಡೆದಿದೆ.

Advertisement

ಪಾರ್ಡಿಯಿಂದ ಚಪ್ರಾಡಾ ಎಂಬಲ್ಲಿಗೆ ನಿಶ್ಚಿತಾರ್ಥಕ್ಕೆ  ತೆರಳಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗ್ಯಾಸ್‌ ಟ್ಯಾಂಕರ್‌ಗೆ ಮುಖಾಮುಖೀಯಾಗಿ ಅವಘಡ ಸಂಭವಿಸಿದೆ.

ಎರಡು ಕುಟುಂಬದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಯವತ್‌ಮಾಳ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next