Advertisement
11ನೇ ವಯಸ್ಸಲ್ಲಿ ಎಡಗೈ ಇಲ್ಲವಾಯ್ತು: ನಿಲೋಫರ್ ಹುಬ್ಬಳ್ಳಿಯ ಕಲ್ಮೇಶ್ವರ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಕಡು ಬಡತನದಲ್ಲೂ ತಂದೆ ಶಂಶುದ್ದೀನ ಧಾರವಾಡದಲ್ಲಿ ಹಮಾಲಿ ವೃತ್ತಿ ಮಾಡಿಕೊಂಡು ಮಗಳ ಸಾಧನೆಗೆ ನೀರೆದಿದ್ದಾರೆ. ನಿಲೋಫರ್ 11ನೇ ವಯಸ್ಸಿನಲ್ಲಿದ್ದಾಗ ಮನೆ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದರು. ಆಗ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಾಗಿ ಎಡಗೈ ಸಂಪೂರ್ಣ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲೂ ಇನ್ನೊಬ್ಬರ ನೆರವು ಬಯಸದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಹಂಬಲ ಹೊಂದಿ ದ್ದಾರೆ. ಆದರೆ ಬಡತನ ಅಡ್ಡಿಯಾಗಿದೆ.
Related Articles
Advertisement
ತರಬೇತಿ: ನೆಹರೂ ಕಾಲೇಜಿನಲ್ಲಿ ಪದವಿ ದ್ವಿತೀಯ ವರ್ಷದಲ್ಲಿದ್ದಾಗ ಕ್ರಿಕೆಟ್ ಆಟದ ಸಂದರ್ಭದಲ್ಲಿ ಕಾಲೇಜಿನ ದೈಹಿಕ ನಿರ್ದೇಶಕ ಇಮಾಮ್ ಹುಸೇನ ಮಕ್ಕುಬಾಯಿ ಇವರ ಪ್ರತಿಭೆ ಗುರುತಿಸಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿದರು. ಮುಂದೆ ಬಾಲಚಂದ್ರ ಸಾಖೆ ಒಂದಿಷ್ಟು ದೈಹಿಕ ಕಸರತ್ತು, ತರಬೇತಿ ನೀಡಿದರು. ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾದ ಮೇಲೆ ಮಹಾಂತೇಶ ಬಳ್ಳಾರಿ ಎನ್ನುವವರ ಬಳಿ ಒಂದಿಷ್ಟು ತರಬೇತಿ ಪಡೆದಿದ್ದಾರೆ.
ತನ್ನ ವಿದ್ಯಾಭ್ಯಾಸ, ತಂಗಿಯರ ಭವಿಷ್ಯದ ಚಿಂತೆ: ಎರಡು ವರ್ಷಗಳ ಅಂತರದಲ್ಲಿ ಪರಿಣಿತರ ತರಬೇತಿಯಿಲ್ಲದೆ ರಾಷ್ಟ್ರಮಟ್ಟದವರಿಗೆ ತಲುಪುವುದು ಸುಲಭವಲ್ಲ. ಆದರೆ ಸಾಧಿಸಬೇಕು ಎನ್ನುವ ಛಲ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದೆ. ಬಿಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆದಿರುವ ನಿಲೋಫರ್ ಮುಂದೇನು ಎನ್ನುವ ಪ್ರಶ್ನೆ ಹೊಂದಿದ್ದಾರೆ. ಸಹೋದರನೂ ಹಮಾಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ತಂಗಿಯರ ಶಿಕ್ಷಣವೂ ನಡೆಯಬೇಕು. ಹಾಗಾಗಿ ಹಣದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಯಾವುದಾದರೂ ಕೆಲಸ ಸಿಕ್ಕರೆ ಸಾಕು ಎಂದು ಅಲೆಯುತ್ತಿದ್ದಾರೆ.
ಹೇಮರಡ್ಡಿ ಸೈದಾಪುರ