Advertisement

Kasaragod ನೀಲೇಶ್ವರ ತೈಕಡಪ್ಪುರ: ನೀರಿನಲ್ಲಿ ಮುಳುಗಿ ಇಬ್ಬರ ಸಾವು

10:56 PM Aug 20, 2023 | Team Udayavani |

ಕಾಸರಗೋಡು: ನೀಲೇಶ್ವರ ತೈಕಡಪ್ಪುರ ಬೋಟು ಜೆಟ್ಟಿ ಸಮೀಪ ರವಿವಾರ ಸಂಜೆ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದ ದಾಮೋದರನ್‌ ಅವರ ಪುತ್ರ ರಾಜೇಶ್‌ (38) ಸಮುದ್ರದ ಅಲೆಗೆ ಸಿಲುಕಿ ಸಮುದ್ರ ಪಾಲಾದರು. ಅವರನ್ನು ರಕ್ಷಿಸಲು ತೆರಳಿದ ಕಾಸರಗೋಡು ಕರಾವಳಿ ರಕ್ಷಣ ಪಡೆಯ ಭರತನ್‌ ಅವರ ಪುತ್ರ ಎಂ. ಸತೀಶ್‌ ಅವರು ಕೂಡ ನೀರು ಪಾಲಾದರು.

Advertisement

ಇವರಿಬ್ಬರನ್ನು ರಕ್ಷಣ ಪಡೆ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಕಾಂಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next