Advertisement

ಅಕ್ಟೋಬರ್‌ 10ಕ್ಕೆ ನಿಖಿಲ್‌ ಹೊಸ ಚಿತ್ರ 4 ಭಾಷೆಗಳಲ್ಲಿ ನಿರ್ಮಾಣ!

10:32 AM Aug 30, 2017 | Team Udayavani |

ಅಂತೂ ನಿಖಿಲ್‌ ಅಭಿನಯದ ಹೊಸ ಚಿತ್ರಕ್ಕೆ ವೇದಿಕೆ ಸಿದ್ಧವಾಗಿದೆ. ನಿಖಿಲ್‌ ಅಭಿನಯದ ಚಿತ್ರಕ್ಕೆ ಕಥೆ ಬರೆಯುವುದಕ್ಕೆ ಮಹೇಶ್‌ ರಾವ್‌, ಗೋಪಿಮೋಹನ್‌ ಮತ್ತು ಮೆಹರ್‌ ರಮೇಶ್‌ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಪೈಕಿ ಮಹೇಶ್‌ ರಾವ್‌ ಅವರ ಕಥೆಯೇ ಓಕೆಯಾಗಿದ್ದು, ಈಗಾಗಲೇ ಕಥೆ-ಚಿತ್ರಕಥೆ ಬರೆಯುವ ಕೆಲಸ ಸದ್ದಿಲ್ಲದೆ ಮುಗಿದಿದೆ.

Advertisement

ಇನ್ನು ಚಿತ್ರವು ಅಕ್ಟೋಬರ್‌ 10ರಂದು ಪ್ರಾರಂಭವಾಗಲಿದೆ ಎಂಬ ಮಾಹಿತಿ ಬಂದಿದೆ. ಹೌದು, ನಿಖಿಲ್‌ ಅಭಿನಯದ ಮೂರನೆ ಹಾಗೂ ಚೆನ್ನಾಂಬಿಕ ಫಿಲಂಸ್‌ ಲಾಂಛನದ ಏಳನೆಯ ಚಿತ್ರವು ಅಕ್ಟೋಬರ್‌ 10ರಂದು ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ಮಹೇಶ್‌ ರಾವ್‌ ಕಥೆ ಮತ್ತು ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕಕೊಂಡಿದ್ದಾರೆ.

ಇನ್ನು ಗುರುರಾಜ್‌ ದೇಸಾಯಿ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುವುದರ ಜೊತೆಗೆ ಸಹನಿರ್ದೇಶನವನ್ನೂ ಮಾಡಲಿದ್ದಾರಂತೆ. ಚಿತ್ರಕ್ಕೆ ಗಾಜುಲ ಶಿವ ಅವರು ಛಾಯಾಗ್ರಹಣ ಮಾಡಿದರೆ, ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವುದು ವಿಶೇಷ. 

Advertisement

Udayavani is now on Telegram. Click here to join our channel and stay updated with the latest news.

Next