Advertisement

ರಾಮನಗರದಿಂದ ಸ್ಪರ್ಧಿಸುವ ಉದ್ದೇಶ ಇಲ್ಲ

03:38 PM Nov 10, 2020 | Suhan S |

ಕನಕಪುರ: ಸುಳ್ಳು ಭರವಸೆ ಕೊಡುವ ಜನಪ್ರತಿನಿಧಿಗಳು ನಾವಲ್ಲ . ಈ ಭಾಗದ ಜನರ ಸಮಸ್ಯೆಗಳನ್ನು 15ರಿಂದ 20 ದಿನಗಳಲ್ಲಿ ಬಗೆಹರಿಸುವುದಾಗಿ ರಾಜ್ಯ ಯುವ ಜಾತ್ಯತೀತ ಜನತಾದಳದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ರಾಮನಗರವಿಧಾನಸಭಾಕ್ಷೇತ್ರದ ತಾಲೂಕಿನಮರಳವಾಡಿ, ಯಲಚವಾಡಿ ಮತ್ತು ತೋಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿ ರಸ್ತೆ ಮತ್ತು ಸೇತುವೆ ದುರಸ್ತಿ ವೀಕ್ಷಣೆ ಮತ್ತು ಆನೆ ಕಾಲ್ತುಳಿತಕ್ಕೆ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಲು ಒಂದು ದಿನದ ಪ್ರವಾಸಕೈಗೊಂಡಿದ್ದ ವೇಳೆ ಅವರು ಮಾತನಾಡಿದರು.

ಸಹಾಯಧನ: ತಾಲೂಕಿನ ಮರಳವಾಡಿ ಹೋಬಳಿ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರು ಬೀದಿ ಗ್ರಾಮದ ಲ್ಲಿರುವ ಆನೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟ ತಮ್ಮಯ್ಯನವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು.

ನಂತರ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವನಹಳ್ಳಿ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ದುರಸ್ತಿ ಕಾಮಗಾರಿ ವೀಕ್ಷಣೆ ನಡೆಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಭಾಗದ ಶಿವನಹಳ್ಳಿ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಕುಮಾರಸ್ವಾಮಿ 1.20 ಕೋಟಿ ರೂ. ಅಂದಾಜು ಮೊತ್ತದ ಯೋಜನೆ ರೂಪಿಸಿ, ಅನುಮೋದನೆ ನೀಡಿದ್ದರಿಂದ ಕಾಮಗಾರಿ ಆರಂಭವಾಗಿತ್ತು. ಆದರೆ, ಕೆಲವು ಕಾರಣಾಂತರಗಿಳಿಂದ ಗುತ್ತಿಗೆದಾರ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತ ಗೊಳಿಸಿದ್ದಾರೆ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು 20 ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನಮ್ಮ  ತವರು: ರಾಮನಗರ ಜಿಲ್ಲೆ ನಮ್ಮ ತಂದೆ ಕುಮಾರಸ್ವಾಮಿ ಅವರಿಗೆ ರಾಜಕೀಯ ಜೀವನ ಕೊಟ್ಟ ಜನತೆ ಇದ್ದಾರೆ. ಹಾಗಾಗಿ ಜಿಲ್ಲೆಯ ಬಗ್ಗೆ ಹೆಚ್ಚಿನ ಜವಾಬ್ದಾರಿ ಇದೆ. ಇದು ನಮ್ಮ ತವರು ಇದ್ದಂತೆ. ಇಲ್ಲಿನ ಗೊಂದಲ, ಸಮಸ್ಯೆ ಬಗೆಹರಿಸಲು ಬಂದಿದ್ದೇನೆ ಹೊರತು ರಾಮನಗರದಿಂದ ಸ್ಪರ್ಧಿಸುವ ಚಿಂತನೆ ಇಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

Advertisement

ಮುಂಬರುವ ಗ್ರಾಪಂ, ತಾಪಂ,ಜಿಪಂ ಚುನಾವಣೆಗಳಲ್ಲಿ ಹಾಗೂ 2023ರ ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಪಕ್ಷ ಸಂಘಟನೆ ಮಾಡಬೇಕು. ಆ ವಿಚಾರವಾಗಿ ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ಬಂದಿದ್ದೇನೆ ಎಂದರು.

 ಷಡ್ಯಂತ್ರದಿಂದ ಸೋತೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ರಾಜಕೀಯ ಸನ್ನಿವೇಶ, ಷಡ್ಯಂತ್ರ ನನ್ನ ವಿರುದ್ಧವಾಗಿ ಕೆಲಸ ಮಾಡಿದ್ದರಿಂದ ಮಂಡ್ಯದಲ್ಲಿ ನಾನು ಸೋತಿದ್ದೇನೆ. ಇದಕ್ಕಾಗಿ ನಾನು ಮತದಾರರನ್ನು ಎಂದು ದೂಷಿಸುವುದಿಲ್ಲ. ಮೈತ್ರಿ ಹೊಂದಾಣಿಕೆ ಮೇಲೆ ಇಟ್ಟಿದ್ದ ನಂಬಿಕೆ ಅಂದು ಹುಸಿಯಾಯಿತು ಹಾಗಾಗಿ ಸೋತಿದ್ದೇನೆ. ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಅಂದಿನ ಚುನಾವಣೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಮತದಾರರು ನನಗೆ ಮಾತ ನೀಡಿದ್ದಾರೆ ಅವರಿಗೆ ನಾನು ಉತ್ತರ ಕೊಡಬೇಕು. ಅವರ ಪರವಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.

ಮರಳವಾಡಿ ಜೆಡಿಎಸ್‌ ಮುಖಂಡ ಪುಟ್ಟರಾಜು, ಮಾಜಿ ಜಿಪಂ ಸದಸ್ಯ ಭುಜಂಗಯ,ಜೆಡಿಎಸ್‌ ಉಪಾಧ್ಯಕ್ಷ ರಾಮಕೃಷ್ಣ, ಶಿವಾನಂದ್‌, ಸೋಮ್‌ಸುಂದರ್‌, ತಮ್ಮಯ್ಯಣ್ಣ, ಶಂಕರಪ್ಪ,ಗುಂಡಪ್ಪ, ಪ್ರದೀಪ್‌ ಸೇರಿದಂತೆ ಹಾರೋಹಳ್ಳಿ ಮತ್ತು ಮರಳವಾಡಿ ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next