Advertisement

Channapatna ಉಪಚುನಾವಣೆಗೆ ನಿಖಿಲ್ ಸ್ಪರ್ಧೆ?: ಬಹಿರಂಗವಾಗಿ ನಿರ್ಧಾರ ಪ್ರಕಟಿಸಿದ ಎಚ್ ಡಿಕೆ

03:12 PM Jun 23, 2024 | Team Udayavani |

ರಾಮನಗರ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಲೋಕಸಭಾ ಸ್ಪರ್ಧೆಯ ಕಾರಣದಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಯ ವಿಚಾರವಾಗಿದೆ. ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸಲಾಗುವುದು ಎನ್ನುವ ಸುದ್ದಿಗಳ ನಡುವೆ ಸ್ವತಃ ಕುಮಾರಸ್ವಾಮಿ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಚನ್ನಪಟ್ಟಣ ಬಮೂಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್ ಡಿಕೆ, ನಿಖಿಲ್ ಎರಡು ಬಾರಿ ಸೋತು ಅವನು ಅನುಭವಿಸುತ್ತಿರುವ ನೋವು ಏನೆಂದು ನನಗೆ ಮಾತ್ರ ಗೊತ್ತು. ಹೀಗಾಗಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅವನನ್ನು ಕಣಕ್ಕಿಳಿಸುವುದಿಲ್ಲ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಗೆ ಸಿ.ಪಿ.ಯೋಗೇಶ್ವರ್ ಆಗಬಹುದು. ಇಲ್ಲ ಜೆಡಿಎಸ್ ನವರೇ ಆಗಬಹುದು, ಎನ್ ಡಿಎ ಅಭ್ಯರ್ಥಿ ಯಾರೇ ಆದರೂ ನಾವು ಒಗ್ಗೂಡಿ ಕೆಲಸ ಮಾಡೋಣ ಎಂದರು.

ಹಾಲು ಉತ್ಪಾದಕರಿಗ ದೇಶಾದ್ಯಂತ ಪ್ರೋತ್ಸಾಹ ಧನ ಕೊಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡುತ್ತೇನೆ. ಈ ಬಗ್ಗೆ ಪ್ರಧಾನಿ ಜೊತೆ ಮಾತನಾಡುತ್ತೇನೆ. ದೇಶದ ಎಲ್ಲಾ ರೈತರಿಗೆ 2 ರಿಂದ 3 ರೂ. ಪ್ರತಿ ಲೀಟರ್ ಗೆ ಕೊಡುವಂತೆ ಮನವೊಲಿಸುತ್ತೇನೆ ಎಂದರು.

ಚನ್ನಪಟ್ಟಣ ಉದ್ದಾರ ಮಾಡುತ್ತೇನೆ ಎಂದು ಬಂದಿರುವವರನ್ನು ಮೊದಲು ಚನ್ನಪಟ್ಟಣ ತಾಲೂಕಿಗೆ ಬರಬೇಕಿರುವ 61 ಕೋಟಿ ಹಾಲಿನ ಪ್ರೋತ್ಸಾಹಧನ ಕೊಡಿ ಎಂದು ಕೇಳಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next