Advertisement

CP Yogeshwar ಸ್ಫೋಟಕ ಹೇಳಿಕೆ ಬೆನ್ನಿಗೆ ದರ್ಶನ್ ಜೊತೆಗಿನ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್

09:54 AM Jun 15, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದು ಡಿ.ಕೆ.ಬ್ರದರ್ಸ್ ಹೇಳಿಕೆ ನೀಡಿದ್ದರು ಆದರೆ​ ಆ ಅಚ್ಚರಿ ಅಭ್ಯರ್ಥಿ ಈಗ ಜೈಲುಪಾಲಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದರು ಇದರ ಬೆನ್ನಲೇ ಕಾಂಗ್ರೆಸ್ ಸಿಪಿ ಯೋಗೇಶ್ವರ್ ಹಾಗೂ ದರ್ಶನ್ ಜೊತೆಗಿರುವ ಫೋಟೋ ಬಿಡುಗಡೆ ಮಾಡುವ ಮೂಲಕ ಟಾಂಗ್ ನೀಡಿದೆ.

Advertisement

ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ದರ್ಶನ್ ನನ್ನ ಕಣಕ್ಕಿಳಿಸಲು ಯೋಜನೆ ನಡೆಸಿತ್ತು ಎಂದು ಸಿಪಿ ಯೋಗೇಶ್ವರ್ ಶುಕ್ರವಾರ ಸ್ಫೋಟಕ ಹೇಳಿಕೆ ನೀಡಿದ್ದರು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಸಿಪಿ ಯೋಗೇಶ್ವರ್ ಹಾಗೂ ಮಗ ದರ್ಶನ್ ಜೊತೆ ಮಾತುಕತೆ ನಡೆಸುವ ಫೋಟೋ ಬಿಡುಗಡೆ ಮಾಡಿ ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪರವಾಗಿ ಪ್ರಚಾರ ಮಾಡಿ ಎಂದು ಸುಳ್ಳೇಶ್ವರ ಹಾಗೂ ಮಗ ಧ್ಯಾನ್ ದರ್ಶನ ಜೊತೆ ಮಾತುಕತೆ ನಡೆಸಿದ್ದರು, ಆದರೆ ದರ್ಶನ್ ಇವರ ಪ್ರಚಾರಕ್ಕೆ ಬಂದಿರಲಿಲ್ಲ ಬಹುಶ ದರ್ಶನ ಅವರಿಗೆ ಯೋಗೇಶ್ವರ್ ಅವರ ನರಿ ಬುದ್ದಿ ಮೊದಲೇ ಗೊತ್ತಿರಬೇಕು ಹಾಗಾಗಿ ಪ್ರಚಾರಕ್ಕೆ ಬಂದಿರಲಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದ್ದಾರೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣಕ್ಕೆ ಬಂದು ತನ್ನ ಪರ ಪ್ರಚಾರ ಮಾಡುವಂತೆ ದರ್ಶನ್ ಅವರನ್ನು ತಂದೆ ಮಗ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಭೇಟಿ ಮಾಡಿದ್ದರು ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Tragedy: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅಪಘಾತ: ಇಬ್ಬರು ವಿದ್ಯಾರ್ಥಿಗಳ ದುರ್ಮರಣ

Advertisement

Udayavani is now on Telegram. Click here to join our channel and stay updated with the latest news.

Next