Advertisement

82 ವಿದ್ಯಾರ್ಥಿನಿಯರ ಬಿಡುಗಡೆ ಮಾಡಿದ ಜಿಹಾದಿಗಳು

01:15 AM May 08, 2017 | Team Udayavani |

ಅಬುಜಾ: ನೈಜೀರಿಯಾದ ಈಶಾನ್ಯ ಭಾಗದಿಂದ 2014ರಲ್ಲಿ ಅಪಹರಣಕ್ಕೊಳಗಾಗಿದ್ದ 200 ಚಿಬೋಕ್‌ ಶಾಲಾ ಬಾಲಕಿಯರ ಪೈಕಿ 82 ಬಾಲಕಿಯರನ್ನು ಜಿಹಾದಿಗಳು ಭಾನುವಾರ ಬಿಡುಗಡೆ ಮಾಡಿದ್ದಾರೆ. ಸ್ಥಳೀಯ ಸರಕಾರದೊಂದಿಗೆ ಆರು ತಿಂಗಳುಗಳ ಕಾಲ ನಡೆದ ಸುದೀರ್ಘ‌ ಮಾತುಕತೆ ನಂತರ ಈ ಬೆಳವಣಿಗೆ ನಡೆದಿದೆ. ಸೆರೆಯಾಳುಗಳಾಗಿದ್ದ ಬಾಲಕಿಯರ ಬದಲಿಗೆ ಜಿಹಾದಿ ಕೈದಿಗಳನ್ನು ಬಿಡುಗಡೆ ಮಾಡುವ ಕರಾರಿಗೆ ನೈಜೀರಿಯಾ ಅಧ್ಯಕ್ಷ ಮುಹುಮ್ಮದು ಬುಹಾರಿ ಸಮ್ಮತಿಸಿದ್ದು, ಅದರಂತೆ ಮೊದಲ ಹಂತದ ವಿನಿಮಯ ನಡೆದಿದೆ. ಆದರೆ, 82 ಬಾಲಕಿಯರಿಗೆ ಪ್ರತಿಯಾಗಿ ಎಷ್ಟು ಕೈದಿಗಳನ್ನು ಬಿಡಗುಡೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next