ಮುಂಬಯಿ: ಸತತವಾಗಿ ಭಾರೀ ಕುಸಿತ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ವಹಿವಾಟು ಮಂಗಳವಾರ (ಮಾರ್ಚ್ 08) ಸಂವೇದಿ ಸೂಚ್ಯಂಕ 581.3 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ತಂತ್ರಜ್ಞಾನದ ಸಮರ್ಪಕ ಬಳಕೆ ಆತ್ಮನಿರ್ಭರತೆಗೆ ಆದ್ಯತೆ: ನಿರ್ಮಲಾ ಸೀತಾರಾಮನ್
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581.03 ಅಂಕಗಳಷ್ಟು ಏರಿಕೆಯೊಂದಿಗೆ 53,424.01 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 150.03 ಅಂಕಗಳಷ್ಟು ಏರಿಕೆಯಾಗಿದ್ದು, 16,013.5 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಇಂಡಿಯನ್ ಆಯಿಲ್, ಸನ್ ಫಾರ್ಮಾ, ಟಾಟಾ ಕನ್ಸೂಮರ್, ಸಿಪ್ಲಾ, ಟಿಸಿಎಸ್, ಟೆಕ್ ಮಹೀಂದ್ರ ಮತ್ತು ಡಾ.ರೆಡ್ಡೀಸ್ ಷೇರುಗಳು ಶೇ.2.8ರಿಂದ ಶೇ.4.2ರಷ್ಟು ಲಾಭಗಳಿಸಿದೆ.
ಮತ್ತೊಂದೆಡೆ ಒಎನ್ ಜಿಸಿ, ಟಾಟಾ ಸ್ಟೀಲ್, ಹಿಂಡಲ್ಕೋ, ಜೆಎಸ್ ಡಬ್ಲ್ಯು ಸ್ಟೀಲ್, ಬ್ರಿಟಾನಿಯಾ, ಯುಪಿಎಲ್ ಮತ್ತು ನೆಸ್ಲೆ ಷೇರುಗಳು ನಷ್ಟ ಕಂಡಿದೆ. ಅಲ್ಲದೇ ಇನ್ಫೋಸಿಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಷೇರುಗಳು ಭಾರೀ ಲಾಭಗಳಿಸಿರುವುದಾಗಿ ವರದಿ ತಿಳಿಸಿದೆ.