Advertisement

ನಿಫ್ಟಿ ಕೈತಪ್ಪಿದ ದಾಖಲೆ

08:20 AM Jul 26, 2017 | Team Udayavani |

ಮುಂಬೈ: ಕೆಲ ದಿನಗಳ ಹಿಂದೆ ನ್ಯಾಷನಲ್‌ ಸ್ಟಾಕ್‌ಎಕ್ಸ್‌ಚೇಂಜ್‌ ನಿಫ್ಟಿ ಸೂಚ್ಯಂಕ 9 ಸಾವಿರ ದಾಟಿ ದಾಖಲೆ ಬರೆದಿತ್ತು. ಮಂಗಳವಾರ ಅದು ಪ್ರಥಮ ಬಾರಿಗೆ 10 ಸಾವಿರ ಪ್ರವೇಶಿಸುವುದರಲ್ಲಿತ್ತು. ಆದರೆ ಕೊನೆಯ ಹಂತದ ಬೆಳವಣಿಗೆಯಿಂದಾಗಿ ಅದನ್ನು ಸಾಧಿಸುವಲ್ಲಿ ಸಾಧ್ಯವಾಗಲಿಲ್ಲ. ಮಧ್ಯಂತರದ ವಹಿವಾಟಿನಲ್ಲಿ 10,011.30ರನ್ನು ತಲುಪಿತ್ತು. ಆದರೆ, ನಂತರ ಶೇ.1.85ರಷ್ಟು ಇಳಿಮುಖವಾಗಿ, ದಿನಾಂತ್ಯಕ್ಕೆ 9,964.55ರಲ್ಲಿ ಮುಕ್ತಾಯವಾಯಿತು.

Advertisement

ಮುಂಗಾರಿನಲ್ಲಿ ಪ್ರಗತಿ, ಜಿಎಸ್‌ಟಿ ಸುಗಮ ಜಾರಿ ಸೇರಿ ಹಲವು ಅಂಶಗಳಿಂದ ಸೂಚ್ಯಂಕ ಮೇಲ್ಮುಖವಾಗಿತ್ತು. ಇನ್ನು ಷೇರುಪೇಟೆ ಕೂಡ ತೇಜಿಯಿಂದ ವಹಿವಾಟು ನಡೆಸಿದರೂ ದಾಖಲೆ ಮಾಡುವಲ್ಲಿ ವಿಫ‌ಲವಾಯಿತು. ದಿನದ ಅಂತ್ಯಕ್ಕೆ 32,228.27ರಲ್ಲಿ ಅಂದರೆ 17.60 ಅಂಶಗಳಷ್ಟು ಕುಸಿತ ಕಂಡಿತು.

Advertisement

Udayavani is now on Telegram. Click here to join our channel and stay updated with the latest news.

Next