ಮುಂಬೈ: ಸತತ ಮೂರು ದಿನಗಳಿಂದ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರದ (ಡಿಸೆಂಬರ್ 07) ವಹಿವಾಟಿನಲ್ಲಿ ಇಳಿಕೆ ಕಂಡಿದೆ.
ಇದನ್ನೂ ಓದಿ:BBC Chairman: ಬಿಬಿಸಿ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಡಾ.ಸಮೀರ್ ಶಾ ಆಯ್ಕೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಇಂದು 88.10 ಅಂಕಗಳಷ್ಟು ಇಳಿಕೆಯಾಗಿದ್ದು, 69,565,63 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ನಿಫ್ಟಿ ಇಂಡೆಕ್ಸ್ 19.10 ಅಂಕ ಇಳಿಕೆಯೊಂದಿಗೆ 20,910.60 ಅಂಕಗಳಲ್ಲಿ ವಹಿವಾಟು ನಡೆದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಹಾಗೂ ಚೀನಾದ ಆರ್ಥಿಕ ಸ್ಥಿತಿ ಏರುಪೇರಾದ ಪರಿಣಾಮ ವಿದೇಶಿ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಕೂಡಾ ಇಳಿಕೆಯ ಹಾದಿ ಹಿಡಿದಿದೆ.
ಸೆನ್ಸೆಕ್ಸ್ ಇಳಿಕೆಯ ನಡುವೆಯೂ ಪವರ್ ಗ್ರಿಡ್ ಕಾರ್ಪ್, ಆಲ್ಟ್ರಾ ಟೆಕ್ ಸಿಮೆಂಟ್, ಮಾರುತಿ ಸುಜುಕಿ, ಬಜಾಜ್ ಫಿನ್ ಸರ್ವ್, ನೆಸ್ಲೆ, ಟೈಟಾನ್ ಕಂಪನಿ, ಕೋಟಕ್ ಮಹೀಂದ್ರ, ಎನ್ ಟಿಪಿಸಿ, ಟಿಸಿಎಸ್, ಏಷಿಯನ್ ಪೇಂಟ್ಸ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಟಾಟಾ ಸ್ಟೀಲ್, ಎಚ್ ಯುಎಲ್, ಲಾರ್ಸೆನ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಐಟಿಸಿ, ರಿಲಯನ್ಸ್, ಇನ್ಫೋಸಿಸ್, ಮಹೀಂದ್ರ & ಮಹೀಂದ್ರ ಷೇರುಗಳು ನಷ್ಟ ಕಂಡಿದೆ.
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ(ಡಿ.06) 357 ಅಂಕ ಏರಿಕೆಯಾಗಿದ್ದು, 69,653 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು. ಅದೇ ರೀತಿ ನಿಫ್ಟಿ ಸೂಚ್ಯಂಕ 82 ಅಂಕ ಏರಿಕೆಯೊಂದಿಗೆ 20,937 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.