ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ರೆಪೋ ದರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬಾಂಬೆ ಷೇರುಪೇಟೆ ವಹಿವಾಟು ಶುಕ್ರವಾರ (ಫೆಬ್ರುವರಿ 05, 2021) ದಾಖಲೆ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ:ಫಸ್ಟ್ ಹಾಫ್ ಒಂದ್ ಲೆಕ್ಕ:ಸೆಕೆಂಡ್‌ಹಾಫ್ ಇನ್ನೊಂದ್ ಲೆಕ್ಕ! ವರ್ಷಪೂರ್ತಿ ಫುಲ್ ಮೀಲ್ಸ್
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 338.58 ಅಂಕಗಳ ಏರಿಕೆಯೊಂದಿಗೆ ದಾಖಲೆಯ 50,952.87 ಅಂಕಗಳ ಗಡಿ ತಲುಪಿದೆ. ಅಲ್ಲದೇ ಎನ್ ಎಸ್ ಇ ನಿಫ್ಟಿ ಕೂಡಾ ಮೊದಲ ಬಾರಿಗೆ 15,000ಕ್ಕೆ ತಲುಪಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ಹಣಕಾಸು ನೀತಿಯನ್ನು ಪ್ರಕಟಿಸುವ ನಿಟ್ಟಿನಲ್ಲಿ ಬಾಂಬೆ ಷೇರುಮಾರುಕಟ್ಟೆ ವಹಿವಾಟು ಭರ್ಜರಿ ಏರಿಕೆ ಕಂಡಿದೆ. 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾದ ನಂತರ ಆರ್ ಬಿಐ ಘೋಷಿಸುತ್ತಿರುವ ಮೊದಲ ಹಣಕಾಸು ನೀತಿ ಇದಾಗಿದೆ
ಷೇರುಪೇಟೆ ಸೆನ್ಸೆಕ್ಸ್ ದಾಖಲೆ ಏರಿಕೆಯಿಂದ ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್, ಟೈಟಾನ್, ಒಎನ್ ಜಿಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್ ಯುಎಲ್ ಮತ್ತು ಆರ್ ಐಎಲ್ ಷೇರುಗಳು ಶೇ.12.60ರಷ್ಟು ಲಾಭ ಗಳಿಸಿವೆ.
ಮತ್ತೊಂದೆಡೆ ಪವರ್ ಗ್ರಿಡ್, ಮಹೀಂದ್ರ ಆ್ಯಂಡ್ ಮಹೀಂದ್ರಾ, ಟಿಸಿಎಸ್, ಮಾರುತಿ, ಬಜಾಜ್ ಆಟೋ, ಭಾರ್ತಿ ಏರ್ ಟೆಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫಿನ್ ಸರ್ವ್, ಆಲ್ಟ್ರಾಟೆಕ್, ಡಾ.ರೆಡ್ಡಿ ಹಾಗೂ ಐಟಿಸಿ ಷೇರುಗಳು ನಷ್ಟ ಅನುಭವಿಸಿದೆ.