ಮುಂಬಯಿ:ಜಾಗತಿಕ ಷೇರುಪೇಟೆಯ ದುರ್ಬಲ ವಹಿವಾಟಿನ ಪರಿಣಾಮ ಗುರುವಾರ(ಸೆಪ್ಟೆಂಬರ್ 30) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 280ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ.
ಇದನ್ನೂ ಓದಿ:ಕೈ ಕೊಟ್ಟ ಪ್ರಿಯತಮ : ನೇಣಿಗೆ ಕೊರಳೊಡ್ಡಿದ ಜ್ಯೂನಿಯರ್ ಆರ್ಟಿಸ್ಟ್
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 286.91 ಅಂಕ ಕುಸಿತ ಕಂಡಿದ್ದು, 59,126.36 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ 93.10 ಅಂಕ ಇಳಿಕೆಯಾಗಿದ್ದು, 17,618.20 ಅಂಕಗಳಲ್ಲಿ ವಹಿವಾಟು ಕೊನೆಗೊಳಿಸಿದೆ.
ಸೆನ್ಸೆಕ್ಸ್, ನಿಫ್ಟಿ ಇಳಿಕೆಯಿಂದ ಪವರ್ ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಈಚರ್ ಮೋಟರ್ಸ್, ಹೀರೋ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಎನ್ ಟಿಪಿಸಿ ಮತ್ತು ಟಾಟಾ ಮೋಟರ್ಸ್ ಷೇರುಗಳು ಲಾಭಗಳಿಸಿದೆ.
ಬುಧವಾರವೂ ಕೂಡಾ ಬಾಂಬೆ ಷೇರುಪೇಟೆಯಲ್ಲಿ ಬಿಎಸ್ ಇ ಸೂಚ್ಯಂಕ 254.33 ಅಂಕ ಕುಸಿದಿದ್ದು, ದಿನಾಂತ್ಯಕ್ಕೆ 59,413.27ರಲ್ಲಿ ವಹಿವಾಟು ಮುಕ್ತಾಯವಾಗಿತ್ತು. ನಿಫ್ಟಿ ಸೂಚ್ಯಂಕ 37.30 ಅಂಕ ಇಳಿಕೆಯಾಗಿ 17,711.30ರಲ್ಲಿ ಮುಕ್ತಾಯಗೊಂಡಿತ್ತು.