ಮುಂಬಯಿ: ರಷ್ಯಾ, ಉಕ್ರೇನ್ ನಡುವಿನ ಸಂಧಾನ ಮಾತುಕತೆ, ಜಾಗತಿಕ ಷೇರುಮಾರುಕಟ್ಟೆಯ ವಹಿವಾಟಿನ ಪರಿಣಾಮ ಬುಧವಾರ (ಮಾರ್ಚ್ 30) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 740 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಆರ್.ಎನ್.ನಾಯಕ್ ಕೊಲೆ ಕೇಸ್ : ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 740.34 ಅಂಕಗಳಷ್ಟು ಏರಿಕೆಯಾಗಿದ್ದು, 58,683.99 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 173 ಅಂಕ ಏರಿಕೆಯೊಂದಿಗೆ 17,498.30 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಸಂವೇದಿ ಸೂಚ್ಯಂಕ ಏರಿಕೆಯಿಂದ ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಲೈಫ್, ಟಾಟಾ ಕನ್ಸೂಮರ್ ಪ್ರೊಡಕ್ಟ್ಸ್, ಬಜಾಜ್ ಫೈನಾನ್ಸ್, ಹೀರೋ ಮೋಟೊ ಕಾರ್ಪ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಒಎನ್ ಜಿಸಿ, ಹಿಂಡಲ್ಕೋ, ಜೆಎಸ್ ಡಬ್ಲ್ಯು ಸ್ಟೀಲ್, ಐಟಿಸಿ ಮತ್ತು ಟಾಟಾ ಸ್ಟೀಲ್ ಷೇರು ನಷ್ಟ ಕಂಡಿದೆ.
ಆಟೋ, ಐಟಿ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್ ಸೆಕ್ಟರ್ ನ ಷೇರುಗಳು ಶೇ.1ರಷ್ಟು ಲಾಭಗಳಿಸಿದೆ. ಮುಂದಿನ ಆರು ತಿಂಗಳಲ್ಲಿ ನೈಸರ್ಗಿಕ ಅನಿಲ ಬೆಲೆಯನ್ನು ಪರಿಷ್ಕರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ ಹಿನ್ನೆಲೆಯಲ್ಲಿ ಅನಿಲ ಮತ್ತು ಇಂಧನ ಸೆಕ್ಟರ್ ಷೇರು ಬೆಲೆ ಕುಸಿತ ಕಂಡಿದೆ.