ಮುಂಬಯಿ: ರಷ್ಯಾ, ಉಕ್ರೇನ್ ನಡುವಿನ ಭೀಕರ ಕಾಳಗದ ಪರಿಣಾಮ ಸೋಮವಾರ (ಫೆ.28) ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 1,000ಕ್ಕೂ ಅಧಿಕ ಅಂಕ ಇಳಿಕೆಯಾಗಿದ್ದು, ದಿನಾಂತ್ಯದಲ್ಲಿ 388.76 ಅಂಕಗಳ ಏರಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಮೇಕೆದಾಟು 2.0: ಮುರುಘಾ ಶ್ರೀಗಳು ಸೇರಿ ಅನೇಕ ಸ್ವಾಮೀಜಿಗಳ ಪಾದಯಾತ್ರೆ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 388.76 ಅಂಕ ಕುಸಿತವಾಗಿದ್ದು, 56,247.28 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 135.50 ಅಂಕ ಇಳಿಕೆಯಾಗಿದ್ದು, 16,793.90 ಅಂಕಗಳ ಮಟ್ಟ ತಲುಪಿದೆ.
ಹಿಂಡಾಲ್ಕೋ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಪವರ್ ಗ್ರಿಡ್ ಕಾರ್ಪೋರೇಶನ್, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಬಿಪಿಸಿಎಲ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಚ್ ಡಿಎಫ್ ಸಿ ಲೈಫ್, ಡಾ.ರೆಡ್ಡೀಸ್ ಲ್ಯಾಬ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,004 ಅಂಕ ಇಳಿಕೆಯಾಗಿದ್ದು, 54,854 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 268 ಅಂಕ ಕುಸಿದಿದ್ದು, 16,390 ಅಂಕಗಳಲ್ಲಿ ವಹಿವಾಟು ನಡೆದಿತ್ತು.