ಮುಂಬಯಿ: ಭಾರತದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ ಎಂಬ ಕಳವಳದ ಪರಿಣಾಮ ಸೋಮವಾರ (ಏಪ್ರಿಲ್ 25) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 617 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಗೋವಾ : ತಿಳಾರಿ ಜಲಪಾತದಲ್ಲಿ ಮುಳುಗಿ ಬೆಳಗಾವಿ ವಿದ್ಯಾರ್ಥಿ ಸಾವು
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 617.26 ಅಂಕ ಇಳಿಕೆಯಾಗಿದ್ದು, 56,579.89 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 218.00 ಅಂಕಗಳಷ್ಟು ಇಳಿಕೆಯಾಗಿದ್ದು, 16,954.00 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಕೋಲ್ ಇಂಡಿಯಾ, ಬಿಪಿಸಿಎಲ್, ಟಾಟಾ ಸ್ಟೀಲ್, ಹಿಂಡಲ್ಕೋ ಇಂಡಸ್ಟ್ರೀಸ್ ಮತ್ತು ಎಸ್ ಬಿಐ ಲೈಫ್ ಇನ್ಸೂರೆನ್ಸ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಬಜಾಜ್ ಆಟೋ, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಮಾರುತಿ ಸುಜುಕಿ ಮತ್ತು ಎಚ್ ಡಿಎಫ್ ಸಿ ಷೇರು ಲಾಭಗಳಿಸಿದೆ.
ಬ್ಯಾಂಕಿಂಗ್ ಕ್ಷೇತ್ರ ಹೊರತುಪಡಿಸಿ ಉಳಿದಂತೆ ಆಟೋ, ಕ್ಯಾಪಿಟಲ್ ಗೂಡ್ಸ್, ಹೆಲ್ತ್ ಕೇರ್, ಐಟಿ, ಮೆಟಲ್, ಆಯಿಲ್ ಆ್ಯಂಡ್ ಗ್ಯಾಸ್ ಕ್ಷೇತ್ರಗಳ ಷೇರುಗಳ ಮೌಲ್ಯ ಶೇ.1ರಿಂದ 4ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.