ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಸೋಮವಾರ (ಜುಲೈ 25) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ರಾಜಕೀಯ ತ್ಯಜಿಸಬೇಕೆಂಬ ಭಾವನೆ ಬರುತ್ತಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 306.01 ಅಂಕಗಳಷ್ಟು ಇಳಿಕೆಯಾಗಿದ್ದು, 55,766.22 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 88.50 ಅಂಕ ಕುಸಿತಗೊಂಡಿದ್ದು, 16,631 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಮಹೀಂದ್ರ ಆ್ಯಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರಿಸ್, ಮಾರುತಿ ಸುಜುಕಿ, ಈಚರ್ ಮೋಟಾರ್ಸ್ ಮತ್ತು ಒಎನ್ ಜಿಸಿ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ಹಿಂಡಲ್ಕೋ ಇಂಡಸ್ಟ್ರೀಸ್ ಮತ್ತು ಅಪೋಲೊ ಆಸ್ಪತ್ರೆ ಷೇರುಗಳು ಲಾಭಗಳಿಸಿದೆ.
ಶುಕ್ರವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಏರಿಕೆಯೊಂದಿಗೆ ಮುಕ್ತಾಯಗೊಂಡಿತ್ತು. ವಾರಾಂತ್ಯದ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆ ಭರ್ಜರಿ ಲಾಭ ಕಂಡುಬಂದಿತ್ತು. ಎಎನ್ ಐ ವರದಿ ಪ್ರಕಾರ, ಶುಕ್ರವಾರ ಬಾಂಬೆ ಷೇರುಪೇಟೆ ಮಾರುಕಟ್ಟೆಯ ಮೌಲ್ಯ 25,190,063.14 ಕೋಟಿ ರೂಪಾಯಿನಿಂದ 26, 106,487.37 ಕೋಟಿಗೆ ಏರಿಕೆಯಾಗಿದೆ.