ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ನೀರಸ ವಹಿವಾಟು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಪರಿಣಾಮ ಸೋಮವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲೇ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ನಂತರವೂ 1,456.74 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ದಾಳಿಕೋರರಿಂದ ಧ್ವಂಸಗೊಂಡ ದೇವಾಲಯಗಳ ಪುನರ್ ನಿರ್ಮಾಣ: ರಾಷ್ಟ್ರವ್ಯಾಪಿ ಅಭಿಯಾನ
ಸೆನ್ಸೆಕ್ಸ್ ಭಾರೀ ಕುಸಿತದ ಪರಿಣಾಮ ಹೂಡಿಕೆದಾರರ 5 ಲಕ್ಷ ಕೋಟಿಗೂ ಅಧಿಕ ಸಂಪತ್ತು ನಷ್ಟವಾಗಿದೆ. ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 1,456.74 ಅಂಕ ಇಳಿಕೆಯಾಗಿದ್ದು, 52,846.70 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಎನ್ ಎಸ್ ಇ ನಿಫ್ಟಿ ಕೂಡಾ 427.40 ಅಂಕ ಕುಸಿತಗೊಂಡಿದ್ದು, 15,774.40 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 1,600ಕ್ಕೂ ಅಧಿಕ ಅಂಕ ಇಳಿಕೆ ಕಂಡಿತ್ತು.
ಸೆನ್ಸೆಕ್ಸ್, ನಿಫ್ಟಿ ಕುಸಿತದಿಂದ ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಹಿಂಡಲ್ಕೋ ಇಂಡಸ್ಟ್ರೀಸ್ ಷೇರುಗಳು ಭಾರೀ ನಷ್ಟ ಕಂಡಿದೆ. ಮತ್ತೊಂದೆಡೆ ನೆಸ್ಲಿ ಇಂಡಿಯಾ ಮತ್ತು ಬಜಾಜ್ ಆಟೋ ಷೇರುಗಳು ಲಾಭಗಳಿಸಿದೆ.