Advertisement
ಇದೇ ರೀತಿ, ನಿಫ್ಟಿ ಕೂಡ 104.55 ಅಂಕಗಳಷ್ಟು ಕುಸಿದು, ದಿನಾಂತ್ಯಕ್ಕೆ 15,208.90ಕ್ಕೆ ತಲುಪಿತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ನೆಸ್ಲೆ ಇಂಡಿಯಾ ಅತಿ ಹೆಚ್ಚು ನಷ್ಟ ಅನುಭವಿಸಿದರೆ, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೈಂಟ್ಸ್, ಎಚ್‌ಡಿಎಫ್ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಮಾರುತಿ, ಡಾ.ರೆಡ್ಡೀಸ್ ಕೂಡ ನಷ್ಟ ಕಾಣಬೇಕಾಯಿತು.
Related Articles
ಮುಂದಿನ ವಿತ್ತೀಯ ವರ್ಷದಲ್ಲಿ ಶೇ.10ರಷ್ಟು ಆರ್ಥಿಕ ಪ್ರಗತಿ ದಾಖಲಿಸಲಿರುವ ಭಾರತವು ಉದಯೋನ್ಮುಖ ಮಾರುಕಟ್ಟೆ ವಲಯದಲ್ಲಿ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ. 2021ರಲ್ಲಿ ಭಾರತದ ಆರ್ಥಿಕತೆಯು ಬಲಿಷ್ಠಗೊಳ್ಳಲಿದೆ. ಮಾ.31ಕ್ಕೆ ಅಂತ್ಯಗೊಳ್ಳುವ ವಿತ್ತ ವರ್ಷದಲ್ಲಿ ವಿತ್ತೀಯ ಕೊರತೆ ಶೇ.9.5 ಎಂದು ಪರಿಗಣಿಸಲಾಗಿದ್ದರೂ, 2021-22ರಲ್ಲಿ ಅದು ಜಿಡಿಪಿಯ ಶೇ.6.8ಕ್ಕಿಳಿಯುವ ನಿರೀಕ್ಷೆಯಿದೆ ಎಂದೂ ರೇಟಿಂಗ್ಸ್ ಸಂಸ್ಥೆ ಹೇಳಿದೆ.
Advertisement