ನವದೆಹಲಿ: ಕಳೆದ ಒಂದು ವಾರದಿಂದ ಸತತ ಇಳಿಕೆ ಕಂಡಿದ್ದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಬುಧವಾರ (ಮಾರ್ಚ್ 01) , 448.96 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಹಿಂದೂ ಧರ್ಮ ರಕ್ಷಿಸಲು ಆಂಧ್ರದಲ್ಲಿ 2 ಸಾವಿರ ದೇವಾಲಯಗಳ ನಿರ್ಮಾಣ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 448.96 ಅಂಕಗಳಷ್ಟು ಏರಿಕೆಯೊಂದಿಗೆ 59,411.08 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 146.90 ಅಂಕ ಏರಿಕೆಯಾಗಿದ್ದು, 17,450.90 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಸೆನ್ಸೆಕ್ಸ್ ಏರಿಕೆಯ ಪರಿಣಾಮ ಅದಾನಿ ಎಂಟರ್ ಪ್ರೈಸಸ್, ಹಿಂಡಲ್ಕೋ ಇಂಡಸ್ಟ್ರೀಸ್, ಯುಪಿಎಲ್, ಎಸ್ ಬಿಐ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಬ್ರಿಟಾನಿಯಾ ಇಂಡಸ್ಟ್ರೀಸ್, ಪವರ್ ಗ್ರಿಡ್ ಕಾರ್ಪೋರೇಶನ್, ಸಿಪ್ಲಾ, ಬಿಪಿಸಿಎಲ್ ಮತ್ತು ಎಸ್ ಬಿಐ ಲೈಫ್ ಇನ್ಸೂರೆನ್ಸ್ ಷೇರುಗಳು ನಷ್ಟ ಕಂಡಿದೆ.
ಪಿಎಸ್ ಯು ಬ್ಯಾಂಕ್, ಮೆಟಲ್, ಆಯಿಲ್ ಆ್ಯಂಡ್ ಗ್ಯಾಸ್, ಇನ್ಫಾರ್ಮೇಷನ್ ಟೆಕ್ನಾಲಜಿ, ಕ್ಯಾಪಿಟಲ್ ಗೂಡ್ಸ್, ಪವರ್ ಸೆಕ್ಟರ್ ಷೇರುಗಳು ಶೇ.2ರಷ್ಟು ಲಾಭಗಳಿಸಿದೆ.