ಮುಂಬಯಿ:ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ಟ್ರೆಂಡ್ ಪರಿಣಾಮ ಸೋಮವಾರ (ಜೂನ್ 20) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 237 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಇಬ್ಬರು ಶಾರ್ಪ್ ಶೂಟರ್ ಗಳ ಬಂಧನ
ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 237.42 ಅಂಕಗಳಷ್ಟು ಏರಿಕೆಯೊಂದಿಗೆ 51,597.84 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 56.70 ಅಂಕಗಳ ಏರಿಕೆಯೊಂದಿಗೆ 15,350.20 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಯುಎಲ್, ಎಚ್ ಡಿಎಫ್ ಸಿ, ಅಪೋಲೊ ಹಾಸ್ಪಿಟಲ್ಸ್, ಏಷಿಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಒಎನ್ ಜಿಸಿ, ಟಾಟಾ ಸ್ಟೀಲ್, ಯುಪಿಎಲ್, ಹಿಂಡಲ್ಕೋ ಇಂಡಸ್ಟ್ರೀಸ್ ಮತ್ತು ಕೋಲ್ ಇಂಡಿಯಾ ಷೇರುಗಳು ನಷ್ಟ ಕಂಡಿದೆ.
ಎಚ್ ಯುಎಲ್, ಎಚ್ ಡಿಎಫ್ ಸಿ, ಬ್ರಿಟಾನಿಯಾ ನಿಫ್ಟಿ ಲಾಭಗಳಿಸಿದ್ದು, ಟಾಟಾ ಸ್ಟೀಲ್, ಯುಪಿಎಲ್ ನಿಫ್ಟಿ ಭಾರೀ ನಷ್ಟ ಕಂಡಿದೆ. ಇಂದು ಬೆಳಗ್ಗೆ ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆಕ್ಸೆಕ್ಸ್ ಅಲ್ಪ ಇಳಿಕೆ ಕಂಡಿತ್ತು.