ಮುಂಬಯಿ : ರಾಷ್ಟ್ರೀಯ ಶೇರು ಮಾರುಕಟ್ಟೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ,ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ, ನಿಫ್ಟಿ ಸೂಚ್ಯಂಕ 10,000 ಅಂಕಗಳ ಐತಿಹಾಸಿಕ ಮಟ್ಟವನ್ನು ದಾಟಿ ಹೊಸ ವಿಕ್ರಮವನ್ನು ಸಾಧಿಸಿದೆ.
ಇದೇ ವೇಳೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯ,ಕ 32,374.30 ಅಂಕಗಳ ಮಟ್ಟವನ್ನು ತಲುಪುವ ಮೂಲಕ ಹೊಸ ಎತ್ತರವನ್ನು ಏರಿದ ದಾಖಲೆಯನ್ನು ಮಾಡಿದೆ.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 44.90 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು ದಾಖಲೆಯ ಐತಿಹಾಸಿಕ 10,000 ಅಂಕಗಳ ಮಟ್ಟವನ್ನು ದಾಟಿ 10,011.30 ಅಂಕಗಳಲ್ಲಿ ಸ್ಥಿತವಾಯಿತು.
ಈ ಸಾಲಿನ ಮೊದಲ ತ್ತೈಮಾಸಿಕ ಫಲಿತಾಂಶ ಬಹುತೇಕ ಹೆಚ್ಚಿನ ಬ್ಲೂ ಚಿಪ್ ಕಂಪೆನಿಗಳ ಮಟ್ಟಿಗೆ ಅತ್ಯುತ್ತಮವಾಗಿ ಮೂಡಿ ಬಂದಿರುವುದರಿಂದ ಹೂಡಿಕೆದಾರರು ಹಾಗೂ ವಹಿವಾಟುದಾರರ ದೊಡ್ಡ ಪ್ರಮಾಣದಲ್ಲಿ ಬ್ಲೂ ಚಿಪ್ ಶೇರುಗಳ ಖರೀದಿಯಲ್ಲಿ ತೊಡಗಿರುವುದೇ ಸೆನ್ಸೆಕ್ಸ್ ಮತ್ತು ನಿಫ್ಟಿ ಯ ದಾಖಲೆ ಮಟ್ಟದ ಸಾಧನೆಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 23.59 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,269.46 ಅಂಕಗಳ ಮಟ್ಟದಲ್ಲೂ, ನಿಫ್ಟಿ 2.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 9,969.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನಲ್ಲಿ ದಾಖಲಾದ ಟಾಪ್ ಗೇನರ್‌ಗಳು ; ಐಡಿಯಾ ಸೆಲ್ಯುಲರ್, ಭಾರ್ತಿ ಇನ್‌ಫ್ರಾಟೆಲ್, ವೇದಾಂತ, ಹೀರೋ ಮೋಟೋ ಕಾರ್ಪ್, ಐಸಿಐಸಿಐ ಬ್ಯಾಂಕ್; ಟಾಪ್ ಲೂಸರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಟಾಟಾ ಮೋಟರ್, ಎಚ್‌ಸಿಎಲ್ ಟೆಕ್, ಈಶರ್ ಮೋಟರ್, ಅಲ್‌ಟ್ರಾ ಟೆಕ್ ಸಿಮೆಂಟ್.