ಮುಂಬೈ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದ ತರುವಾಯ ಶುಕ್ರವಾರ (ಫೆ.02) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 1,000ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ವಹಿವಾಟು ನಡೆಸಿದೆ.
ಇದನ್ನೂ ಓದಿ:Rishabh Pant; ಪಂದ್ಯದ ಬಳಿಕ ತುಂಬಾ ಅಳುತ್ತಿದ್ದೆ…: ಧೋನಿ ಹೋಲಿಕೆಯ ಬಗ್ಗೆ ಪಂತ್ ಮಾತು
ಇಂದು ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,000 ಅಂಕಗಳಷ್ಟು ಏರಿಕೆಯೊಂದಿಗೆ 72,600.84 ಅಂಕಗಳ ದಾಖಲೆಯ ಮಟ್ಟ ತಲುಪಿದ್ದು, ಭರ್ಜರಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ ದಾಖಲೆಯ 22,126.80 ಅಂಕಗಳ ಮಟ್ಟ ತಲುಪಿದೆ.
ಗುರುವಾರ(ಫೆ.01) ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಿದ್ದ ಬೆನ್ನಲ್ಲೇ ಬಾಂಬೆ ಷೇರುಪೇಟೆ 28 ಅಂಕಗಳ ಅಲ್ಪ ಇಳಿಕೆಯೊಂದಿಗೆ ವಹಿವಾಟು ಅಂತ್ಯಗೊಂಡಿತ್ತು.
ಸೆನ್ಸೆಕ್ಸ್ ಏರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್, ಟಾಟಾ ಮೋಟಾರ್ಸ್ ಲಿಮಿಟೆಡ್, ಜೆಎಸ್ ಡಬ್ಲ್ಯು ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಷೇರುಗಳು ಲಾಭಗಳಿಸಿದೆ.
ಅದೇ ರೀತಿ ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಪವರ್ ಗ್ರಿಡ್ ಕಾರ್ಪೋರೇಶನ್, ಇನ್ಫೋಸಿಸ್ ಲಿಮಿಟೆಡ್, ಎನ್ ಟಿಪಿಸಿ, ಟೆಕ್ ಮಹೀಂದ್ರಾ ಲಿಮಿಟೆಡ್, ಯೆಸ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ವೋಡಾಪೋನ್ ಐಡಿಯಾ ಲಿಮಿಟೆಡ್ ಷೇರುಗಳು ಲಾಭಕಂಡಿದೆ.