Advertisement

ಕೆಟ್ಟದೇನೂ ಆಗಿಲ್ಲ…ಹೇಗೆ ತೆಗೆದು ಹಾಕಲಿ?

07:25 PM Jun 28, 2021 | Team Udayavani |

ಭೌತ ವಿಜ್ಞಾನದಲ್ಲಿ ದೊಡ್ಡ ಹೆಸರು ಮಾಡಿದ್ದ ನೀಲ್ಸ್‌ ಬೋರ್‌, ಬೇರೆ ವಿಜ್ಞಾನಿಗಳಂತೆಯೇ”ವೈಜ್ಞಾನಿಕ ಮನೋಧರ್ಮ’ದ ವ್ಯಕ್ತಿಯಾಗಿದ್ದ.ಅಂದರೆ ಆತ ಕಟ್ಟುಪಾಡು, ಸಂಪ್ರದಾಯಗಳನ್ನೆಲ್ಲ ಆಚರಿಸುತ್ತಿರಲಿಲ್ಲ. ಮೌಡ್ಯ ಎಂದು ಪರಿಗಣಿಸಲ್ಪಟ್ಟ ಯಾವುದನ್ನೂ ಮಾಡುತ್ತಿರಲಿಲ್ಲ. ಸ್ವಲ್ಪಮಟ್ಟಿಗೆ ನಿರೀಶ್ವರವಾದಿಯೂ ಆಗಿದ್ದ.ಅವನ ಹಳ್ಳಿಮನೆಗೆ ಬಂದಕಾಸಿಮಿರ್‌ ಎಂಬ ವಿಜ್ಞಾನಿಗೆ ಎಲ್ಲಕ್ಕಿಂತ ಮೊದಲು ಗಮನ ಸೆಳೆದದ್ದು ಬಾಗಿಲ ಚೌಕಟ್ಟಿನಮೇಲೆ ಗೋಡೆಯಲ್ಲಿ ನೇತುಹಾಕಿದ್ದ ಕುದುರೆಲಾಳ ಅವನ್ನು ಮನೆ ಮುಂದೆ ತೂಗು ಹಾಕಿದರೆ ಶುಭ ಎಂಬುದು ಯುರೋಪಿನಲ್ಲಿದ್ದ ಒಂದು ನಂಬಿಕೆ.

Advertisement

ಅಂಥ ನಂಬಿಕೆಗಳನ್ನು ಜನಸಾಮಾನ್ಯರು ಆಚರಿಸುವುದೇನೋಸರಿ. ಆದರೆ ಜಗತøಸಿದ್ಧ ವಿಜ್ಞಾನಿಗಳುಕೂಡ ಆಚರಿಸುವುದೆಂದರೆ?ಮನಸ್ಸಿಗೆ ಬಂದ ಈ ಪ್ರಶ್ನೆಯನ್ನು ಕಾಸಿಮಿರ್‌ಕೇಳಿಯೇಬಿಟ್ಟ.”ಛೇ! ಛೇ! ಎಲ್ಲಾದರೂ ಉಂಟೇ?ವಿಜ್ಞಾನಿಯ ಮನೆಯಲ್ಲಿ ಮೌಢಾಚರಣೆಯೆ? ಖಂಡಿತ ಇಲ್ಲ’ ಎಂದುಬೋರ್‌ ಉತ್ತರಿಸಿದ.”ಹಾಗಾದರೆ ಆ ಕುದುರೆಲಾಳವನ್ನು ಗೋಡೆಯಮೇಲಿನಿಂದ ತೆಗೆದುಬಿಡಿರಲ್ಲ?’ ಹೇಳಿದಕಾಸಿಮಿರ್‌”ಏನಾದರೂ ಅಶುಭಸಂಭವಿಸಿದರೆ ಖಂಡಿತವಾಗಿಅದನ್ನು ತೆಗೆದು ಹಾಕುತ್ತೇನೆ.ಆದರೆ ಅದನ್ನು ಅಲ್ಲಿ ಹಾಕಿದದಿನದಿಂದ ಅಂಥಅಶುಭವೇನೂ ನಡೆದಿಲ್ಲವಲ್ಲಾ’ ಎಂದ ಬೋರ್‌ಪ್ರತಿಯಾಗಿ.

Advertisement

Udayavani is now on Telegram. Click here to join our channel and stay updated with the latest news.

Next