Advertisement

Nidhi subbaiah; ಶೆಫ್ ಚಿದಂಬರ ಜೊತೆ ಕೂರ್ಗ್ ಬ್ಯೂಟಿ

05:10 PM Dec 19, 2023 | Team Udayavani |

ನಟ ಅನಿರುದ್ಧ್ ನಾಯಕನಾಗಿ ಅಭಿನಯಿಸಿರುವ ಹಾಗೂ ನಿರ್ದೇಶಕ ಎಂ.ಆನಂದರಾಜ್‌ ನಿರ್ದೇಶನದ ಶೆಫ್ ಚಿದಂಬರ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಬಿರುಸಿನಿಂದ ಸಾಗಿದೆ. ಇತ್ತೀಚಿಗೆ ನಾಯಕಿ ನಿಧಿ ಸುಬ್ಬಯ್ಯ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಮೋನ ಎಂಬದು ನಿಧಿ ಸುಬ್ಬಯ್ಯ ಅವರ ಪಾತ್ರದ ಹೆಸರು. ನಿಧಿ ಸುಬ್ಬಯ ಅವರ ಕೈಯಲ್ಲಿ ಬೇಡಿಯಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಲೆಕ್ಕಾಚಾರ ಆರಂಭವಾಗಿದೆ.

Advertisement

ಬಹಳ ದಿನಗಳ ನಂತರ ನಿಧಿ ಸುಬ್ಬಯ್ಯ ಅವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನಿಧಿ ಅವರ ಪೋಸ್ಟರ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕುತೂಹಲ ಮೂಡಿಸಿರುವ ನಿಧಿ ಅವರ ಪಾತ್ರ ಏನು ಎಂಬುದನ್ನು ಚಿತ್ರದಲ್ಲಿ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಆನಂದರಾಜ್.

ಡಾರ್ಕ್‌ ಕಾಮಿಡಿ ಜಾನರ್‌ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ದಮ್ತಿ ಪಿಕ್ಚರ್ಸ್‌ ಲಾಂಛನದಲ್ಲಿ ರೂಪ ಡಿ.ಎನ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್‌ ಪರಶುರಾಮ್‌ ಬರೆದಿದ್ದಾರೆ.

ಉದಯಲೀಲ ಛಾಯಾಗ್ರಹಣ, ರಿತ್ವಿಕ್‌ ಮುರಳಿರ್ಧ ಸಂಗೀತ ನಿರ್ದೇಶನ ವಿಜೇತ್‌ ಚಂದ್ರ ಸಂಕಲನ, ವಿಕ್ರಾಂತ್‌ ರೋಣ ಖ್ಯಾತಿಯ ಆಶಿಕ್‌ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್‌ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್‌ ಮಾಕ್ಟೇಲ್ ಖ್ಯಾತಿಯ ರೆಚೆಲ್‌ ಡೇವಿಡ್‌ ಅಭಿನಯಿಸಿದ್ದಾರೆ. ಶರತ್‌ ಲೋಹಿ ತಾಶ್ವ, ಕೆ.ಎಸ್‌ ಶ್ರೀಧರ್‌, ಶಿವಮಣಿ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next