Advertisement

ನಿಡಗುಂದಿ: ಕ್ರಿಮಿನಾಶಕ ಸಿಂಪಡಣೆಗೆ ಡ್ರೋಣ್‌ ಬಳಕೆ

07:28 PM Sep 24, 2022 | Shwetha M |

ನಿಡಗುಂದಿ: ಇಸ್ರೇಲ್‌ ಮಾದರಿ ಕೃಷಿಗೆ ರೈತರು ಮುಂದಾಗುತ್ತಿದ್ದು, ತಂತ್ರಜ್ಞಾನ ಯುಗ ಕೃಷಿ ಕೇತ್ರಕ್ಕೂ ಲಗ್ಗೆ ಇಟ್ಟಿದೆ. ತಂತ್ರಜ್ಞಾನದ ಮೂಲಕ ಅನೇಕ ಆವಿಷ್ಕಾರಗಳನ್ನು ಮಾಡುವ ಮೂಲಕ ಸಮಸ್ತವೂ ವರ್ಚುವಲ್ಲ ರೈತರ ಕೃಷಿಯೂ ತಂತ್ರಜ್ಞಾನದ ನೆರವಿನಿಂದ ರೈತ ಸ್ನೇಹಿಯಾಗುವತ್ತ ಹೆಜ್ಜೆ ಹಾಕಿದೆ.

Advertisement

ಇದಕ್ಕೆ ಸಾಕ್ಷಿ ಎಂಬಂತೆ ನಿಡಗುಂದಿಯಲ್ಲಿನ ರೈತ ಆಂಜನೇಯ, ಲಾವಣಿ ಪಡೆದ ತನ್ನ 27 ಎಕರೆ ಪ್ರದೇಶದಲ್ಲಿ ಕಬ್ಬು, ಬದನಿ, ಚೆಂಡುಹೂವು, ಟಮೋಟೆ, ಹಗಲಕಾಯಿ, ಕಲ್ಲಂಗಡಿ, ಬಾಳಿ ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡನೆ ಮಾಡಲು ಡ್ರೋಣ್‌ ಬಳಸಿ ಗಮನ ಸೆಳೆದಿದ್ದಾರೆ. ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆ ಬಳಸುವ ಸಾಧನವಾಗಿದ್ದ ಈ ಡ್ರೋಣ್‌, ಈಗ ರೈತರ ಹೊಲ ಗದ್ದೆಗಳ ಮೇಲೆ ಹಾರಾಡುತ್ತಾ ರಾಸಾಯನಿಕ ಸಿಂಪಡಿಸುತ್ತಿದೆ.

ಕಡಿಮೆ ವೆಚ್ಚ: ಪ್ರತಿ ಎಕರೆಗೆ ಕಡಿಮೆ ವೆಚ್ಚದಿಂದ ಡ್ರೋಣ್‌ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೆಚ್ಚು ಸಮಯ ಬೇಕು. ಆದರೆ, ಡ್ರೋಣ್‌ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತದೆ ಎನ್ನುತ್ತಾರೆ ರೈತರು.

ಜಿಪಿಎಸ್‌ ಅಳವಡಿಕೆ: ಈ ಡ್ರೋಣ್‌ ಸಾಧನಕ್ಕೆ ಜಿಪಿಎಸ್‌ ಅಳವಡಿಸಲಾಗಿದ್ದು, ಹೊಲದ ಬದುವಿನಲ್ಲೇ ಕುಳಿತು ರಿಮೋಟ್‌ ಕಟ್ರೋಲ್‌ನಿಂದ ಇಡಿ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಇದರಿಂದ ಕೂಲಿಯಾಳು ಸಮಸ್ಯೆಯಿಲ್ಲ, ಕ್ರಿಮಿನಾಶಕದ ಸೈಡ್‌ ಎಫೆಕ್ಟ್ ಸಹ ಇಲ್ಲ.

ಲೆಕ್ಕ ಕೊಡುತ್ತೆ ಈ ಡ್ರೋಣ್‌: ಸುಮಾರು 10 ಲಕ್ಷ ರೂಪಾಯಿಯ ಈ ಡ್ರೋಣ್‌ಗೆ 12 ಲೀಟರ್‌ ಸಾಮರ್ಥ್ಯದ ಕ್ಯಾನ್‌ ಅಳವಡಿಸಲಾಗಿದೆ. ಇದರ ಜತೆಗೆ ಜಿಪಿಎಸ್‌ ಸಹ ಅಳವಡಿಸಿದ ಪರಿಣಾಮ ಎಷ್ಟು ಎಕರೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ ಎಂಬುದರ ನಿಖರ ಲೆಕ್ಕ ತಿಳಿಯಬಹುದಾಗಿದೆ.

Advertisement

ತೋಟಗಾರಿಕೆ ಬೆಳೆಗಳಿಗೂ ಸೈ: ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟಾ ಸೇರಿ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಕ್ರಿಮಿನಾಶಕ ಮಿಶ್ರಣ ಬೆರೆಸಿ ಜಿಪಿಎಸ್‌ ಮೂಲಕ ಕೆಲಸ ನಿಗದಿ ಮಾಡಿದ್ರೆ ಸಾಕು ಕೆಲಸ ಮುಗಿದಂತೆ.

ಬಾಡಿಗೆ ಲಭ್ಯ: ನಿಡಗುಂದಿಯ ರೈತ ಆಂಜನೇಯ ರೆಡ್ಡಿ, ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡನೆಗಾಗಿ ಬಳಸುತ್ತಿರುವ ಡ್ರೋಣ್‌, ಬಾಡಿಗೆಗೂ ಲಭ್ಯವಿದೆ. ಕಡಿಮೆ ವೆಚ್ಚ ಹಾಗೂ ಸಮಯದ ಉಳಿತಾಯ ಮಾಡುವ ನಿಟ್ಟಿನಲ್ಲಿ ಸುತ್ತಲಿನ ರೈತರಿಗೆ ಡ್ರೋಣ್‌ ಬಾಡಿಗೆ ಸಿಗಲಿದೆ. ಆದರೆ, ಡ್ರೋಣ್‌ ಸ್ವತಃ ಅವರೆ ತಂದು ಕ್ರಿಮಿನಾಶಕ ಸಿಂಪಡಿಸುತ್ತಾರೆ. ಡ್ರೋಣ್‌ ಕ್ರಿಮಿನಾಶಕ ಸಿಂಪಡಣೆ ಅಷ್ಟೆ ಅಲ್ಲದೇ ಬಿತ್ತನೆಗೆ ಸಾಲು ಕೂಡಾ ಬಿಡಲಿದೆ ಎಂದು ರೈತ ಆಂಜನೇಯ. ಮಾಹಿತಿಗೆ ಮೊ. 9611148409 ಗೆ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next