ಮುಂಬೈ: ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಹಲವರು ಸಹಾಯಕ್ಕೆ ನಿಂತಿದ್ದಾರೆ. ಐಪಿಎಲ್ ಆಟಗಾರ ಪ್ಯಾಟ್ ಕಮಿನ್ಸ್ ಅವರು ಪಿಎಂ ಕೇರ್ ಫಂಡ್ ಗೆ ಸಹಾಯ ಮಾಡಿದ ನಂತರ ಇದೀಗ ಹಲವು ಆಟಗಾರರು ಸಹಾಯಕ್ಕೆ ಮುಂದಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವೇಗಿ ಜಯದೇವ್ ಉನಾದ್ಕತ್ ಅವರು ಸಹಾಯಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಪ್ರಕಟಿಸಿರುವ ಉನಾದ್ಕತ್, ಅಗತ್ಯ ವೈದ್ಯಕೀಯ ಚಿಕಿತ್ಸೆಗೆ ಬಳಸಿಕೊಳ್ಳಲು ಐಪಿಎಲ್ ನ ವೇತನದ ಶೇ.10ರಷ್ಟು ಮೊತ್ತವನ್ನು ನೀಡುವುದಾಗಿ ಜಯದೇವ್ ಉನಾದ್ಕತ್ ಹೇಳಿದ್ದಾರೆ.
ಇದನ್ನೂ ಓದಿ:ಬೊರಿವಲಿ ಗಲ್ಲಿಯಲ್ಲಿ ಆಫ್ ಸ್ಪಿನ್ನರ್ ಆಗಿದ್ದ ರೋಹಿತ್ ದ್ವಿಶತಕದ ಕನಸೂ ಕಂಡಿರಲಿಕ್ಕಿಲ್ಲ…
ಪಂಜಾಬ್ ಕಿಂಗ್ಸ್ ಬ್ಯಾಟ್ಸಮನ್, ವೆಸ್ಟ್ ಇಂಡೀಸ್ ಮೂಲದ ಆಟಗಾರ ನಿಕೋಲಸ್ ಪೂರನ್ ಕೂಡಾ ಭಾರತದ ನೆರವಿಗೆ ಬಂದಿದ್ದಾರೆ. ತನ್ನ ಐಪಿಎಲ್ ವೇತನದ ಒಂದು ಭಾಗವನ್ನು ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ನೀಡುತ್ತಿದ್ದೇನೆ ಎಂದು ಪೂರನ್ ಹೇಳಿದ್ದಾರೆ.
ಕೋವಿಡ್ 19 ಸೋಂಕಿನಿಂದ ಹಲವು ದೇಶಗಳು ಸಮಸ್ಯೆ ಅನುಭವಿಸುತ್ತಿದ್ದರೂ, ಭಾರತದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೂರನ್ ಟ್ವೀಟ್ ಮಾಡಿದ್ದಾರೆ.