ಬೆಂಗಳೂರು: ಜಿಎಸ್‌ಟಿ ಜಾರಿಯ ಬೆನ್ನಲ್ಲೇ ವಾಹನ ಸವಾರರಿಗೆ ಶಾಕ್ ಎಂಬಂತೆ ನೈಸ್ ರಸ್ತೆಯಲ್ಲಿ ಟೋಲ್ ದರವನ್ನು ಶೇಕಡಾ 20 ರಷ್ಟು ಹೆಚ್ಚಿಸಲಾಗಿದೆ.
ಟೋಲ್ ದರ ಹೆಚ್ಚಿಸಿರುವ ಕುರಿತು ನೈಸ್ ಸಂಸ್ಥೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು ನೂತನ ದರ ಇಂದಿನಿಂದಲೇ ಅನ್ವಯವಾಗಲಿದೆ ಎಂದಿದೆ.
ಕಳೆದ ನಾಲ್ಕು ವರ್ಷದ ಬಳಿಕ ದರ ಹೆಚ್ಚಳ ಮಾಡಲಾಗಿದ್ದು ನಿಗದಿಯಂತೆ ಶೇಕಡಾ 40 ರಷ್ಟು ಹೆಚ್ಚಳ ಮಾಡಬೇಕಾಗಿತ್ತು ಆದರೆ 20 ರಷ್ಟು ಮಾತ್ರ ಹೆಚ್ಚಳ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.
ಎಷ್ಟು ಹೆಚ್ಚಳವಾಯಿತು?
ಬನ್ನೇರು ಘಟ್ಟ ದಿಂದ ಹೊಸುರು ನೈಸ್ ರಸ್ತೆಯಲ್ಲಿ ಬೈಕ್, ಸ್ಕೂಟರ್ ದರ 13 ರೂಪಾಯಿಯಿಂದ 17 ರೂಪಾಯಿ, ಕಾರುಗಳ ಟೋಲ್ ದರ 33 ರೂಪಾಯಿಯಿಂದ 40 ರೂಪಾಯಿ ,ಬಸ್‌ಗಳ ದರ 90 ರೂಪಾಯಿಯಿಂದ 108 ರೂಪಾಯಿಗೆ ಏರಿಕೆಯಾಗಿದ್ದು, ಲಾರಿಗಳ ದರ 58 ರೂ.ನಿಂದ 78 ರೂಪಾಯಿಗೆ ಏರಿದೆ.
ಬನ್ನೇರು ಘಟ್ಟ ದಿಂದ ಕನಕಪುರ ನೈಸ್ ರಸ್ತೆಯಲ್ಲಿ ಬೈಕ್, ಸ್ಕೂಟರ್ ದರ 10 ರೂಪಾಯಿಯಿಂದ 12 ರೂಪಾಯಿ, ಕಾರುಗಳ ಟೋಲ್ ದರ 26 ರೂಪಾಯಿಯಿಂದ 31 ರೂಪಾಯಿ ,ಬಸ್‌ಗಳ ದರ 70 ರೂಪಾಯಿಯಿಂದ 84 ರೂಪಾಯಿಗೆ ಏರಿಕೆಯಾಗಿದ್ದು, ಲಾರಿಗಳ ದರ 45 ರೂ.ನಿಂದ 54 ರೂಪಾಯಿಗೆ ಏರಿದೆ.