Advertisement

ಅಮರಾವತಿ ಉಮೇಶ್ ಹತ್ಯೆ ಮಾಡಿದ್ದು ತೀವ್ರಗಾಮಿ ಇಸ್ಲಾಮಿಸ್ಟ್‌ ಗಳು: ಎನ್ಐಎ ವರದಿ

11:55 AM Dec 20, 2022 | Team Udayavani |

ಮುಂಬೈ: ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಮಹಾರಾಷ್ಟ್ರದ ಅಮರಾವತಿಯ ಫಾರ್ಮಸಿಸ್ಟ್ ಉಮೇಶ್ ಕೋಲ್ಹೆ ಅವರನ್ನು ಪ್ರವಾದಿ ಮೊಹಮ್ಮದ್‌ ನ ಅವಮಾನದ ಪ್ರತೀಕಾರಕ್ಕಾಗಿ ತಬ್ಲಿಘಿ ಜಮಾತ್‌ ನ ತೀವ್ರಗಾಮಿ ಇಸ್ಲಾಮಿಸ್ಟ್‌ ಗಳು ಹತ್ಯೆ ಮಾಡಿದ್ದಾರೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಸಲ್ಲಿಸಿದೆ.

Advertisement

ಇದನ್ನು ತೀವ್ರಗಾಮಿಗಳ ಗುಂಪಿನಿಂದ ಭಯೋತ್ಪಾದಕ ಕೃತ್ಯ ಎಂದು ಕರೆದಿರುವ ಎನ್ಐಎ, ಕೋಲ್ಹೆ ಕೊಲೆಯ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವವರಿಗೆ ಒಂದು ಉದಾಹರಣೆಯನ್ನು ಸೆಟ್ ಮಾಡಲು ಬಯಸಿದ್ದರು ಎಂದು ಹೇಳಿದೆ.

ಔಷಧ ಮಾರಾಟಗಾರರಾಗಿದ್ದ ಉಮೇಶ್ ಕೊಲ್ಹೆ ಅವರು ಜೂನ್ 21ರಂದು ಅಮರಾವತಿ ನಗರದಲ್ಲಿ ತಮ್ಮ ಅಂಗಡಿಯಿಂದ ಮನೆಗೆ ಮರಳಿ ಬರುತ್ತಿದ್ದ ಸಂದರ್ಭದಲ್ಲಿ, ಮೋಟಾರ್‌ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ನಡೆದಿತ್ತು. ಅವರ 27 ವರ್ಷದ ಮಗ ಮತ್ತು ಹೆಂಡತಿ ಬೇರೆ ವಾಹನದಲ್ಲಿ ಇದ್ದ ಕಾರಣ ಇವರನ್ನು ಕಾಪಾಡಲು ಸಾಧ್ಯವಾಗಿರಲಿಲ್ಲ.

ಡಿಸೆಂಬರ್‌ 11ರಂದು ಈ ಕುರಿತು ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಸಿದ್ದು, “ತಬ್ಲಿಘಿ ಜಮಾತ್‌ ನ ತೀವ್ರಗಾಮಿ ಇಸ್ಲಾಮಿಸ್ಟ್‌ ಗಳು ಉಮೇಶ್ ಕೋಲ್ಹೆಯನ್ನು ಹತ್ಯೆ ಮಾಡಿದ್ದಾರೆʼʼ ಎಂದು ಪ್ರತಿಪಾದಿಸಿದೆ.

ಇದನ್ನೂ ಓದಿ:1,20,000 ರೂ. ಮ್ಯಾಕ್​ಬುಕ್ ಪ್ರೊ ಆರ್ಡರ್ ಮಾಡಿದಾತನಿಗೆ ಬಂದದ್ದು ನಾಯಿಗೆ ಹಾಕುವ ಪೆಡಿಗ್ರಿ.!

Advertisement

ಈ ಭಯೋತ್ಪಾದಕ ಗ್ಯಾಂಗ್ (11 ಆರೋಪಿಗಳ ಗುಂಪು) “ಗುಸ್ತಾಖ್ -ಇ- ನಬಿ ಕಿ ಐಕ್ ಸಾಜಾ, ಸಾರ್ ತಾನ್ ಸೆ ಜುದಾ” ಎಂಬ  ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು ಎಂದು ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. ರಾಜಸ್ಥಾನದ ಉದಯಪುರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡುವ ಒಂದು ವಾರದ ಮೊದಲು ಕೊಲೆ ನಡೆದಿತ್ತು. ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ 11 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಅವರೆಲ್ಲರನ್ನೂ ಬಂಧಿಸಲಾಗಿದೆ.

ಯಾವುದೇ ಆಸ್ತಿ ವಿವಾದ ಅಥವಾ ಆರೋಪಿಗಳೊಂದಿಗೆ ಪೂರ್ವ ದ್ವೇಷವಿಲ್ಲದ ಕೋಲ್ಹೆಯನ್ನು ಕೊಲ್ಲಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next