Advertisement
ಕೆಲವು ಎನ್‌ಜಿಒ ಮತ್ತು ಟ್ರಸ್ಟ್‌ಗಳು ದೇಣಿಗೆ ಮತ್ತು ವ್ಯಾಪಾರ ಕೊಡುಗೆಗಳ ರೂಪದಲ್ಲಿ ಭಾರತ ಮತ್ತು ವಿದೇಶಗಳಿಂದ ಹಣ ಸಂಗ್ರಹಿಸಿ ಭಯೋತ್ಪಾದನೆ ಮತ್ತು ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಚಟು ವಟಿಕೆಗಳ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಸಂಪೂರ್ಣ ತನಿಖೆ ನಡೆಸಿ ಅ. 8ರಂದು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ.
ಬೆಂಗಳೂರಿನ ಆರ್.ಟಿ. ನಗರದ ಸ್ವಾತಿ ಶೇಷಾದ್ರಿ ಅವರ ಕಚೇರಿ ಮತ್ತು ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಈಕೆ “ಇಕ್ವಿಷನ್’ ಎಂಬ ಸರಕಾರೇತರ ಸಂಸ್ಥೆ ನಡೆಸು ತ್ತಿದ್ದರು. ಜಮ್ಮು-ಕಾಶ್ಮೀರದಲ್ಲಿ 370 ರದ್ದು ಪಡಿಸಿದ ಬಳಿಕ ಅಲ್ಲಿನ ವಸ್ತುಸ್ಥಿತಿ ಬಗ್ಗೆ 2019ರಲ್ಲಿ ಮಾಹಿತಿ ಸಂಗ್ರಹಿಸಿದ್ದರು. ಆಕೆ ಸರಕಾರೇತರ ಸಂಸ್ಥೆ ಜೆಕೆಸಿಸಿಎಸ್ ಜತೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಇದೆ. ಕಾಶ್ಮೀರದಲ್ಲೂ ದಾಳಿ
ಜೆಕೆಸಿಸಿಎಸ್ ಸಂಯೋಜಕ ಖುರಂ ಪರ್ವೇಜ್, ಅವರ ಸಹಚರರು, ಪರ್ವೀನಾ ಅಹಂಗೇರ್ ಮತ್ತು ಎನ್‌ಜಿಒ ಅರ್ಥರೂಟ್ ಮತ್ತು ಗ್ರೇಟರ್ ಕೈಲಾಶ್ (ಜಿ.ಕೆ.) ಟ್ರಸ್ಟ್‌ನ ನಿವಾಸ ಮತ್ತು ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಶ್ರೀನಗರದ ಪತ್ರಿಕೆಯೊಂದರ ಮೇಲೂ ಎನ್‌ಐಎ ದಾಳಿ ನಡೆದಿದೆ.